ಸುವರ್ಣ ರಂಗ ಸಮ್ಮಾನ್' ಪ್ರಶಸ್ತಿಗೆ ಆಹ್ವಾನ
ಕಾಂತಾವರ: ಕಾಂತಾವರ ಕನ್ನಡ ಸಂಘ ಖ್ಯಾತ ರಂಗಕರ್ಮಿ ಸದಾನಂದ ಸುವರ್ಣ ಹೆಸರಿನಲ್ಲಿ 'ಸುವರ್ಣ ರಂಗ ಸಮ್ಮಾನ್' ಹೆಸರಿನ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪ್ರತಿ ವರ್ಷ ಮಾ.27ರಂದು ನಡೆಯುವ 'ವಿಶ್ವ ರಂಗಭೂಮಿ ದಿನಾಚರಣೆ' ಅಂಗವಾಗಿ ನೀಡುತ್ತಿದೆ. ರಾಷ್ಟ್ರಮಟ್ಟದ ಪ್ರತಿಭಾವಂತ ರಂಗಕರ್ಮಿ ಒಬ್ಬರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸುವುದು ಉದ್ದೇಶ. ಈ ಗೌರವ ರು. 10 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ರಂಗಾಸಕ್ತರು ಹಾಗೂ ಸಾರ್ವಜನಿಕರು ಈ ಸಾಲಿನಲ್ಲಿ ಈ ಪ್ರಶಸ್ತಿಗೆ ಒಬ್ಬ ರಂಗಕರ್ಮಿಯ ಹೆಸರನ್ನು ಅವರ ಸಾಧನೆಗಳ ಮಾಹಿತಿಯೊಂದಿಗೆ ಫೆ. 20ರ ಒಳಗಾಗಿ ತಲಪುವುಂತೆ: ಡಾ.ಸೀತಾಲಕ್ಷ್ಮೀ ಕರ್ಕಿಕೋಡಿ, ಪ್ರಶಸ್ತಿಯ ಸಂಚಾಲಕರು, ಸುವರ್ಣಗಿರಿ ಮಹಡಿ, ಅಬ್ಬಕ್ಕ ನಗರ ಬಡಾವಣೆ, ಮೊದಲನೇ ಮುಖ್ಯ ರಸ್ತೆ, ಮೊದಲನೇ ತಿರುವು, ಕೊಟ್ಟಾರ ಮಂಗಳೂರು, 575 006. (ದೂ: 9986087345) ವಿಳಾಸಕ್ಕೆ ಕಳುಹಿಸುವಂತೆ ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ತಿಳಿಸಿದ್ದಾರೆ.