ಸೆಕ್ಸ್, ಡ್ರಗ್ಸ್ ಮಾಫಿಯಾ ಹೆಚ್ಚಳ; ತನಿಖೆಗೆ ಆಗ್ರಹ
ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಸೆಕ್ಸ್, ಡ್ರಗ್ಸ್, ಬ್ಲ್ಯಾಕ್ಮೇಲ್ ಮಾಫಿಯಾ, ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಈ ಘಟನೆಗಳ ಬಗ್ಗೆ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು ಎಂದು ಬಜರಂಗ ದಳ ಆಗ್ರಹಿಸಿದೆ. ಈ ಬಗ್ಗೆ ಬಜರಂಗ ದಳದ ಮಂಗಳೂರು ವಿಭಾಗ ಸಂಚಾಲಕ ಶರಣ್ ಪಂಪ್ವೆಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಉಡುಪಿಯಲ್ಲಿ ಯಾಸೀರ್ ಎಂಬಾತ ಯುವತಿಯೊಬ್ಬಳ ಅಶ್ಲೀಲ ಫೋಟೋಗಳನ್ನು ಫೇಸ್ಬುಕ್ಗೆ ಹಾಕಿದ್ದು, ದೇರಳಕಟ್ಟೆ ಅಶ್ಲೀಲ ವಿಡಿಯೋ ಚಿತ್ರೀಕರಣ, ಕೊಣಾಜೆ ಇಲ್ಯಾಸ್ ಎಂಬಾತ ಫೇಸ್ಬುಕ್ನಲ್ಲಿ ಯುವತಿಯನ್ನು ಬ್ಲ್ಯಾಕ್ಮೇಲ್ ಮಾಡಿದ್ದು, ಪುತ್ತೂರಿನ ಮಧುಶ್ರೀ ಎಂಬ ಹುಡುಗಿಯೊಂದಿಗೆ ತಾಹೀರ್ ನಾಪತ್ತೆಯಾಗಿರುವುದು ಸೆಕ್ಸ್ ಮಾಫಿಯಾ ಹೆಚ್ಚಿರುವುದಕ್ಕೆ ಉದಾಹರಣೆಗಳಾಗಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಜರಂಗ ದಳ ಉಡುಪಿ ಜಿಲ್ಲಾ ಸಂಚಾಲಕ ಸುನಿಲ್ ಕೆ.ಆರ್, ದಕ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ದಕ ಜಿಲ್ಲಾ ಗೋರಕ್ಷಾ ಸಂಚಾಲಕ ಪ್ರದೀಪ್ ಪಂಪ್ವೆಲ್, ಉಡುಪಿ ಗೋರಕ್ಷಾ ಸಂಚಾಲಕ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.