ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪ್ರಮುಖ ದೇವಸ್ಥಾನಗಳಿಗೆ ಬಸ್ ಸಂಪರ್ಕ-ಸೂಚನೆ

Lingaraj Badiger
Updated On : 13 Jan 2014, 1:43 am

ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ದೇವಸ್ಥಾನಗಳಿಗೆ ಬಸ್ ಸಂಪರ್ಕ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗಾಧಿಕಾರಿ ಸುರೇಶ್ ಕುಮಾರ್‌ಗೆ ಸೂಚನೆ ನೀಡಿದರು.
ಪ್ರಮುಖ ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಬಸ್ ಇಲ್ಲದೆ ತೊಂದರೆಯಾಗುತ್ತಿರುವ ಕುರಿತು ದೂರುಗಳು ಬಂದಿವೆ. ಈ ಕಾರಣಕ್ಕೆ ಸುಬ್ರಹ್ಮಣ್ಯದಿಂದ- ಧರ್ಮಸ್ಥಳಕ್ಕೆ- ಕೊಲ್ಲೂರಿಗೆ ಬಸ್ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಭಕ್ತರು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ತೆರಳುವಲ್ಲಿ ಯಾವುದೇ ತೊಂದರೆಗಳಾಗದಂತೆ ಕ್ರಮ ಕೈಗೊಳ್ಳುವಂತೆ ಹೇಳಿದರು.
ಕಾಸರಗೋಡು ಭಾಗಕ್ಕೆ ಪುತ್ತೂರಿನಿಂದ ಬಸ್ ಕಲ್ಪಿಸಬೇಕು ಎಂದು ಹಲವು ಬೇಡಿಕೆಗಳು ಬಂದ ಹಿನ್ನೆಲೆಯಲ್ಲಿ ಬೇಡಿಕೆ ಕುರಿತು ಶಾಸಕಿ ಶಕುಂತಳಾ ಶೆಟ್ಟಿ ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಮಂಡೆಕೋಲು- ಅಡೂರು- ಈಶ್ವರಮಂಗಲ ಮಾರ್ಗವಾಗಿ ಪುತ್ತೂರಿಗೆ, ಪೆರ್ಲ- ಅಡ್ಕಸ್ಥಳ- ವಿಟ್ಲ ಮಾರ್ಗವಾಗಿ ಪುತ್ತೂರು, ಪೆರ್ಲ- ಪಾಣಾಜೆ ಮಾರ್ಗವಾಗಿ ಪುತ್ತೂರಿಗೆ ಹಾಗೂ ಪೆರ್ಲ- ಅಡ್ಕಸ್ಥಳ ವಿಟ್ಲ ಪರಿಯಾಲ್ತಡ್ಕ ಮಾರ್ಗವಾಗಿ ಪುತ್ತೂರಿಗೆ ನೂತನ ಬಸ್ ಸಂಚಾರ ಆರಂಭಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಪುತ್ತೂರು ಉಪವಿಭಾಗಾಧಿಕಾರಿ ಎಚ್. ಕೃಷ್ಣಮೂರ್ತಿ, ತಹಸೀಲ್ದಾರ್ ಕುಳ್ಳೇ ಗೌಡ, ಪುರಸಭಾ ಮುಖ್ಯಾಧಿಕಾರಿ ಸುಧಾಕರ್, ಪುರಸಭಾ ಅಧ್ಯಕ್ಷೆ ವಾಣಿ ಶ್ರೀಧರ್, ಉಪಾಧ್ಯಕ್ಷ ಜೀವಂದರ್ ಜೈನ್, ಕಂದಾಯ ಅಧಿಕಾರಿ ಕುಂಞಣ್ಣ ರೈ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement