18, 19ರಂದು 'ಸಮರ್ಪಣ್' ನೃತ್ಯೋತ್ಸವ
ಮಂಗಳೂರು: ನೃತ್ಯಾಂಗನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ. 18 ಮತ್ತು 19 ರಂದು ಡೊಂಗನಕೇರಿ ಕೆನರಾ ಹೆಣ್ಮಕ್ಕಳ ಪ್ರೌಢಶಾಲೆಯಲ್ಲಿ 'ಸಮರ್ಪಣ್' ನೃತ್ಯೋತ್ಸವ ನಡೆಯಲಿದೆ.
ಜ. 18 ರಂದು ಸಂಜೆ 5.30ಕ್ಕೆ ಹಿರಿಯ ನೃತ್ಯ ಗುರು ಜಯಲಕ್ಷ್ಮಿ ಆಳ್ವ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ಚಂದ್ರಹಾಸ ರೈ ಹಾಗೂ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಕಾರ್ಯದರ್ಶಿ ನಿತ್ಯಾನಂದ ರಾವ್ ಪಾಲ್ಗೊಳ್ಳುವರು ಎಂದು ಟ್ರಸ್ಟ್ ನಿರ್ದೇಶಕಿ ರಾಧಿಕಾ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2 ದಿನ ನಡೆಯುವ ಶಾಸ್ತ್ರೀಯ ನೃತ್ಯ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಬೆಂಗಳೂರು, ಕೊಲ್ಕತ್ತಾ, ಯುಎಸ್ಎ ನೃತ್ಯ ಕಲಾವಿದರು ಪ್ರದರ್ಶನ ನೀಡುವರು. ಇತ್ತೀಚೆಗೆ ನೃತ್ಯ ಕಲಾವಿದರಿಗೆ ವೈಯುಕ್ತಿಕ ಪ್ರದರ್ಶನ ನೀಡಲು ಅವಕಾಶ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಸಂಗೀತ ಮಯ್ಯಾ, ಮಂಜುಳಾ ಸುಬ್ರಹ್ಮಣ್ಯ ಇದ್ದರು.