ಕಾನೂನು ಕ್ರಮಕ್ಕೆ ಆಗ್ರಹ
ಉಡುಪಿ: ಇತ್ತೀಚೆಗೆ ಫೇಸ್ಬುಕ್ನಲ್ಲಿ ಪ್ರಕಟಿಸಲ್ಪಟ್ಟ ಕಟಪಾಡಿಯ ಮುಹಮ್ಮದ್ ಯಾಸೀರ್ ಮತ್ತು ಆತನ ಸ್ನೇಹಿತೆಯ ಅಶ್ಲೀಲ ಭಂಗಿಯ ಚಿತ್ರಗಳು ಸಮಾಜದ ನೈತಿಕ ಅದಃಪತನದ ಆಳವನ್ನು ತೋರಿಸುತ್ತದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು ಎಂದು ಜಮಾತೆ ಇಸ್ಲಾಮೀ ಹಿಂದ್ ಉಡುಪಿ ಘಟಕ ಉಪ ಸಂಚಾಲಕ ಎಂ. ಶಬ್ಬೀರ್ ಮಲ್ಪೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.