ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಸ್ತೆ ಕಾಮಗಾರಿಗೆ ತಂದಿಟ್ಟಿದ್ದ 30 ಬ್ಯಾರಲ್ ಡಾಂಬರು ಕಳವು

Rashmi Kasaragodu
Updated On : 14 Jan 2014, 1:27 am

ಸುಳ್ಯ: ರಸ್ತೆ ದುರಸ್ತಿಗೆಂದು ಕಲ್ಲುಗುಂಡಿಯಲ್ಲಿ ತಂದಿಟ್ಟಿದ್ದ ಡಾಂಬರ್ ಬ್ಯಾರಲ್ಗಳಲ್ಲಿ 30 ಬ್ಯಾರಲ್ ಡಾಂಬರು ಕಳವಾಗಿರುವ ಘಟನೆ ನಡೆದಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಲ್ಲುಗುಂಡಿ ವ್ಯಾಪ್ತಿಯಲ್ಲಿ ರಸ್ತೆ ಡಾಂಬರಿಕರಣ ನಡೆಯುತ್ತಿದ್ದು, ಇದಕ್ಕಾಗಿ ಕಂಟ್ರಾಕ್ಟರ್ ವಿ.ವಿ. ಬಾಲನ್ ಅವರು ಕಲ್ಲುಗುಂಡಿ ಒತ್ತೆಕೋಲ ಮೈದಾನದಲ್ಲಿ ಸುಮಾರು 60 ಬ್ಯಾರಲ್ ಡಾಂಬರ್ ತಂದಿರಿಸಿದ್ದರು. ಜ.9ರಂದು ಮುಂಜಾನೆ ಬ್ಯಾರಲ್ ನೋಡಿದಾಗ ಸಂಖ್ಯೆ ಕಡಿಮೆಯಿರುವುದು ಕಂಡುಬಂತು. ಎಣಿಸಿದಾಗ ಸುಮಾರು 30 ಬ್ಯಾರಲ್ ನಾಪತ್ತೆಯಾಗಿತ್ತು. ಸ್ಥಳದಲ್ಲಿ ಸ್ವರಾಜ್ ಮಜ್ದಾ ವಾಹನದ ಚಕ್ರದ ಗುರುತುಗಳು ಕಂಡುಬಂತು. ಬಳಿಕ ವಿ.ವಿ. ಬಾಲನ್ ಅವರು ಬ್ಯಾರಲ್ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಗೆ ಬಂದು ದೂರು ನೀಡಿದರು.
ಒಂದು ಬ್ಯಾರಲ್ 160 ಕೆ.ಜಿ. ತೂಕವಿದ್ದು, ರು. 9 ಸಾವಿರ ಮೌಲ್ಯ ಇದೆ. ಒಟ್ಟು ರು. 2 ಲಕ್ಷದ 70 ಸಾವಿರ ಮೌಲ್ಯದ 30 ಬ್ಯಾರಲ್ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರಿನಿಂದ ಶ್ವಾನ ದಳ ಬಂದು ಪರಿಶೀಲನೆ ನಡೆಸಿದೆ. ಆದರೆ ಯಾವುದೇ ಕುರುಹು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಬ್ಯಾರಲ್ ಇರಿಸಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಡಾಂಬರ್ ಕೆಲಸಗಾರರು ಮಲಗಿದ್ದರು. ಆದರೆ ಕಳ್ಳರು ಬ್ಯಾರಲ್ ಕೊಂಡು ಹೋಗುವಾಗ ಅವರ್ಯಾರಿಗೂ ತಿಳಿಯಲಿಲ್ಲ. ಪೊಲೀಸರು ಅವರೆಲ್ಲರ ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement