ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

19ರಂದು ಅ.ಭಾ. ಕೊಂಕಣಿ ಲೇಖಕರ ಸಂಘಟನೆ ಅಸ್ತಿತ್ವಕ್ಕೆ

Vishwanath S
Updated On : 16 Jan 2014, 1:14 am

ಮಂಗಳೂರು: ಕೊಂಕಣಿಯನ್ನು ದೇವನಾಗರಿವಾದಿಗಳಿಂದ ರಕ್ಷಿಸಲು ಮತ್ತು ಕೊಂಕಣಿಯ ಎಲ್ಲ ಲಿಪಿಗಳ ಸಾಹಿತ್ಯಕ್ಕೆ ನ್ಯಾಯ ಸಿಗುವಂತೆ ಮಾಡಲು, ಕೊಂಕಣಿ ಭಾಷೆಯ ವಿವಿಧತೆ ಉಳಿಸಿ ಬೆಳೆಸಲು ಜಾಗತಿಕ ಕೊಂಕಣಿ ಸಂಘಟನೆಯಿಂದ ಅಖಿಲ ಭಾರತ ಕೊಂಕಣಿ ಲೇಖಕರ ಸಂಘಟನೆ ಅಸ್ತಿತ್ವಕ್ಕೆ ಬರುತ್ತಿದೆ. ಇದರ ಉದ್ಘಾಟನೆ ಜ.19ರಂದು ಮಂಗಳೂರಿನ ಕಲಾಂಗಣದಲ್ಲಿ ನಡೆಯಲಿದೆ ಎಂದು ಜಾಗತಿಕ ಕೊಂಕಣಿ ಸಂಘಟನೆ ಪ್ರಧಾನ ಕಾರ್ಯದರ್ಶಿ ಎರಿಕ್ ಒಝಾರಿಯೊ ತಿಳಿಸಿದ್ದಾರೆ.  ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಸೆ.29ರಂದು ಅಖಿಲ ಭಾರತ ಲೇಖಕರ ಸಮ್ಮೇಳನದಲ್ಲಿ ಎಲ್ಲ ಲಿಪಿಗಳಿಗೆ ಮಾನ್ಯತೆ ಮತ್ತು ವಿವಿಧತೆಯಲ್ಲಿ ಏಕತೆ ಎಂಬ ಮೂಲತತ್ವಗಳ ಮೇಲೆ ಅಖಿಲ ಭಾರತ ಕೊಂಕಣಿ ಲೇಖಕರ ಸಂಘಟನೆ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು. ಗೋವಾ, ಮಹಾರಾಷ್ಟ್ರ, ಕರ್ನಾಟಕ, ಕೇರಳದಿಂದ ಸಂಘಟನೆ ಉದ್ಘಾಟನೆಗೆ 100 ಮಂದಿ ಕೊಂಕಣಿ ಲೇಖಕರು ಆಗಮಿಸಲಿದ್ದು, ಸಂವಿಧಾನ ಮಂಜೂರು, ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆ, ಕಾರ್ಯಯೋಜನೆ ಹಮ್ಮಿಕೊಳ್ಳಲಾಗುವುದು. ಇದೇ ಸಂದರ್ಭ ಗಿನ್ನಿಸ್ ದಾಖಲೆ ವೀರ ಗೋಪಾಲ ಖಾರ್ವಿಯನ್ನು ಸನ್ಮಾನಿಸಲಾಗುವುದು ಎಂದರು.
ದೇವನಾಗರಿಗೆ ಮಣೆ ಯಾಕೆ?: ಕೊಂಕಣಿಯನ್ನು ಕನ್ನಡ, ರೋಮನ್, ದೇವನಾಗರಿ, ಮಲಯಾಳಂ ಮತ್ತು ಪರ್ಸೊ ಅರಬಿಕ್ ಈ 5 ಲಿಪಿಗಳಲ್ಲಿ ಬರೆಯುತ್ತಿದ್ದರೂ ಕಳೆದ 75 ವರ್ಷಗಳಿಂದ ದೇವನಾಗರಿವಾದಿಗಳು ಅದೇ ಲಿಪಿಯಲ್ಲಿ ಕೊಂಕಣಿ ಭಾಷೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿವೆ. ದೇವನಾಗರಿ ಲಿಪಿಯನ್ನು ಕೊಂಕಣಿಯ ಅಧಿಕೃತ, ನೈಸರ್ಗಿಕ, ಪವಿತ್ರ ಲಿಪಿಯಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕಾರ್ಯಯೋಜನೆ, ಅನುದಾನಗಳು ಕೇವಲ ದೇವನಾಗರಿ ಲಿಪಿಗೆ ದೊರಕುವಂತೆ ಮಾಡಿ ಗೋವಾ ಅಧಿಕೃತ ಭಾಷೆ ಕಾಯ್ದೆಯಿಂದ ರೋಮನ್ ಲಿಪಿಯನ್ನು ಹೊರಗಿಡುವಂತೆ ಮಾಡಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement