ಅನೈತಿಕ ಕೆಲಸದಲ್ಲಿ ತೊಡಗಿದವರ ವಿರುದ್ಧ ನೈತಿಕ ಪೊಲೀಸರ ಕಾರ್ಯಾಚರಣೆ !
ಮಂಗಳೂರು: ನಗರದ ನಲಪ್ಪಾಡ್ ವಸತಿಗೃಹದಲ್ಲಿ ತಂಗಿದ್ದ ನಗರದ ಭಿನ್ನಕೋಮಿನ ಜೋಡಿಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ನಗರದ ಪ್ರತಿಷ್ಠಿತ ಹೊಟೇಲ್ನಲ್ಲಿ ಕೆಲಸಕ್ಕೆ ಇರುವ ಜೋಡಿ, ಒಂದು ವರ್ಷದಿಂದ ಪ್ರೇಮಿಸುತ್ತಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಯುವಕ ಮತ್ತು ಬಹುಸಂಖ್ಯಾತ ಸಮುದಾಯದ ಯುವತಿ ವಸತಿಗೃಹದ ಕೋಣೆಯಲ್ಲಿ ಒಟ್ಟಿಗೆ ಇದ್ದಾರೆ ಎಂಬ ಮಾಹಿತಿ ಪಡೆಯದ ಕೆಲವು ಮಂದಿ ಲಾಡ್ಜ್ಗೆ ನುಗ್ಗಿ ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಪೊಲೀಸರು ಇಬ್ಬರ ವಿವರ ಪಡೆದು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.