ಬೆಳ್ತಂಗಡಿ: ಮಡಂತ್ಯಾರು ಗ್ರಾಮದ ಶ್ರೀಕ್ಷೇತ್ರ ಪಾರೆಂಕಿಯ ಶ್ರೀ ಮಹಿಷಮರ್ದಿನಿ ದೇವಿಗೆ ಜ.31ರಿಂದ ಫೆ.4ರವರೆಗೆ ನಡೆಯುವ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭಾನುವಾರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಆಡಳ್ತೆ ಮೊಕ್ತೇಸರ ಬಿ.ರತ್ನಾಕರ ಶೆಟ್ಟಿ ಮೂಡಾಯೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಅಧಿಕಾರಿ, ಕಾರ್ಯದರ್ಶಿ ಕಾಂತಪ್ಪ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ.ಜಯಂತ ಶೆಟ್ಟಿ, ಕಾರ್ಯದರ್ಶಿ ವೀರೇಂದ್ರ ಕುಮಾರ್, ಪ್ರಧಾನ ಅರ್ಚಕ ಟಿ.ವಿ.ಶ್ರೀಧರ ರಾವ್, ಆರ್ಥಿಕ ಸಮಿತಿ ಸಂಚಾಲಕ ರಾಜಶೇಖರ ಶೆಟ್ಟಿ, ಹೊರೆಕಾಣಿಕೆ ಸಮಿತಿ ಸಂಚಾಲಕ ವಿಶ್ವನಾಥ ಪೂಜಾರಿ, ಪ್ರಚಾರ ಸಮಿತಿ ಸಂಚಾಲಕ ಪ್ರಶಾಂತ್ ಪುಂಜಾಲಕಟ್ಟೆ, ಹರೀಶ್ ಶೆಟ್ಟಿ ಪದೆಂಜಿಲ, ವೇದಾವತಿ ಆಚಾರ್ಯ, ಬೇಬಿ ಕೊಡೆಂಬೋಡಿ ಇದ್ದರು.