ಇಂದು ಹಸಿರು ಹೊರೆ ಕಾಣಿಕೆ ಮೆರವಣಿಗೆ
ಮೂಲ್ಕಿ: ಜ.18ರಂದು ನಡೆಯಲಿರುವ ಉಡುಪಿ ಪರ್ಯಾಯೋತ್ಸವಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆಯು ಗುರುವಾರ ಮಧ್ಯಾಹ್ನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದಿಂದ ಕ್ಷೇತ್ರದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರ ನೇತೃತ್ವದಲ್ಲಿ ಹೊರಡಲಿದೆ. ಕಟೀಲು, ಅತ್ತೂರು, ಕೊಡೆತ್ತೂರು, ಶಿಬರೂರು, ಎಕ್ಕಾರು, ಬಜ್ಪೆ, ಕಿನ್ನಿಗೋಳಿ, ಪುನರೂರು ಹಾಗೂ ಅಸುಪಾಸಿನ ಗ್ರಾಮಸ್ಥರ ಹಸಿರು ಹೊರೆ ಕಾಣಿಕೆ ಮೆರವಣಿಗೆಯು ಕಿನ್ನಿಗೋಳಿ, ಮೂಲ್ಕಿ ಮೂಲಕ ಉಡುಪಿಗೆ ಸಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.