ಧರ್ಮಸ್ಥಳದಿಂದ ರು. 11 ಲಕ್ಷ ಕೊಡುಗೆ
ದೇವಾಲಯ ಗರ್ಭಗುಡಿಗೆ ತಾಮ್ರದ ಹೊದಿಕೆ ಹಾಸುವ ಸಂಪೂರ್ಣ ವೆಚ್ಚವಾದ ರು. 11 ಲಕ್ಷವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕೊಡುಗೆಯಾಗಿ ನೀಡಿದ್ದಾರೆ. ಸುಮಾರು ರು. 90 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ಸಂದರ್ಭ ಉದ್ಘಾಟನೆಗೊಳ್ಳಲಿರುವ ಸುಸಜ್ಜಿತ ಅನ್ನಛತ್ರ ಮತ್ತು 1000 ಆಸನ ವ್ಯವಸ್ಥೆ ಕಲ್ಪಿಸಬಹುದಾದ ಬಹುಪಯೋಗಿ ಸಭಾಭವನ ಶ್ರೀ ಪಾರೆಂಕಿ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯಾಗಲಿದೆ.