ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

'ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ' ತುಳು ಚಿತ್ರ ಏಪ್ರಿಲ್ನಲ್ಲಿ ಬಿಡುಗಡೆ

Rashmi Kasaragodu
Updated On : 16 Jan 2014, 11:43 am

ಮಂಗಳೂರು: ತುಂಗಭದ್ರ ಫಿಲಂಸ್ನ 'ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ' ತುಳು ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ಶೇಖರ್ ಕೋಟ್ಯಾನ್ ಹೇಳಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರು. 1.35 ಕೋಟಿ ವೆಚ್ಚದ ಚಿತ್ರ ಕೇರಳ, ಶಿವಮೊಗ್ಗ, ಕುಂದಾಪುರ, ಮೂಲ್ಕಿ, ಬಾರ್ಕೂರು ಪ್ರದೇಶದಲ್ಲಿ ಚಿತ್ರೀಕರಣಗೊಂಡಿದೆ. 5 ಹಾಡುಗಳಿದ್ದು, ಉದಿತ್ ನಾರಾಯಣ್, ಅಜಯ್ ವಾರಿಯರ್, ರಾಜೇಶ್ಕೃಷ್ಣ ಸೇರಿದಂತೆ 6 ಮಂದಿ ಧ್ವನಿ ನೀಡಿದ್ದಾರೆ ಎಂದರು. ಶ್ರೀ ನಾರಾಯಣ ಗುರು ಪಾತ್ರದಲ್ಲಿ ನಟ ವೆಂಕಟಾದ್ರಿ, ಕ್ರೀಡಾ ಸಚಿವ ಅಭಯಚಂದ್ರ ಜೈನ್ ಅವರು ರವೀಂದ್ರನಾಥ್ ಠಾಗೂರ್ ಆಗಿ ಮಿಂಚಿದ್ದಾರೆ. ತಾನು ಹಳ್ಳಿಯ ಯಜಮಾನನ ಪಾತ್ರದಲ್ಲಿ, ಉಳಿದಂತೆ ವಿಜಯ ರಾಘವೇಂದ್ರ, ಬಾಲಕೃಷ್ಣ ಶೆಟ್ಟಿ, ಸೂರ್ಯೋದಯ, ಜಯ ಸಿ. ಸುವರ್ಣ, ಉಮಾನಾಥ್ ಕೋಟ್ಯಾನ್, ಚಂದ್ರಶೇಖರ್ ಸುವರ್ಣ, ಅಶೋಕ್ ಕಾರ್ನಾಡ್, ಚಂದ್ರಕಾಂತ್ ಅಭಿನಯಿಸಿದ್ದಾರೆ. ಬೆಂಗಳೂರು, ಮುಂಬೈ, ಅಹಮ್ಮದಬಾದ್, ಗುಜರಾತ್, ದಿಲ್ಲಿ, ದುಬೈನಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಚಿತ್ರದಲ್ಲಿ ಕಿರಿಯ ಕಲಾವಿದರ ಕೊರತೆ ಕಂಡುಬಂದಿದ್ದು, ಬಿಜಾಪುರದಿಂದ ಕೆಲವರನ್ನು ಕರೆಸಿಕೊಳ್ಳಬೇಕಾಯಿತು. ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ನಿರೀಕ್ಷೆಯಿಂದ ಚಿತ್ರ ನಿರ್ಮಾಣಗೊಳಿಸಲಾಗಿದೆ ಎಂದರು. ಚಿತ್ರಕ್ಕೆ ಪ್ರವೀಣ್ ಗೋಡ್ಖಿಂಡಿ ಸಂಗೀತ, ಪಿ.ಕೆ.ಎಚ್. ದಾಸ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಕಥೆಗಾರ ಮೂಲ್ಕಿ ಚಂದ್ರಶೇಖರ್ ಸುವರ್ಣ, ಚಿತ್ರತಂಡದ ಅನಿಲ್ ಯು.ಪಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement