7 ನಾಮಪತ್ರ ತಿರಸ್ಕೃತ
ಮೂಲ್ಕಿ: ಜ.27ರಂದು ನಡೆಯಲಿರುವ ಮೂಲ್ಕಿ ಪಟ್ಟಣ ಪಂಚಾಯಿತಿಯ ಎಲ್ಲ 17 ವಾರ್ಡ್‌ಗಳ ಚುನಾವಣೆಯ ನಾಮಪತ್ರ ಪರಿಶೀಲನೆ ಮುಕ್ತಾಯಗೊಂಡಿದ್ದು, 60 ನಾಮಪತ್ರಗಳಲ್ಲಿ ಬಿಜೆಪಿಯಿಂದ ಎರಡು, ಜೆಡಿಎಸ್‌ನಿಂದ ಮೂರು ಹಾಗೂ ಎಸ್‌ಡಿಪಿಐನಿಂದ ಎರಡು ಸೇರಿದಂತೆ ಒಟ್ಟು 7 ನಾಮಪತ್ರ ತಿರಸ್ಕೃತಗೊಂಡಿವೆ. ಅಂತಿಮವಾಗಿ ಕಾಂಗ್ರೆಸ್, ಬಿಜೆಪಿಯಿಂದ ತಲಾ 17, ಜೆಡಿಎಸ್‌ನಿಂದ 9, ಎಸ್‌ಡಿಪಿಐನಿಂದ 6 ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 53 ಮಂದಿ ಕಣದಲ್ಲಿ ಉಳಿದಿದ್ದಾರೆ. ಜ.18 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ.
ವಾರ್ಡ್ 9ರಲ್ಲಿ ಬಿಜೆಪಿಯಿಂದ 2 ನಾಮಪತ್ರ ಸಲ್ಲಿಸಿದ್ದು, ಪ್ರಕಾಶ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ವಾರ್ಡ್ 10ರಲ್ಲಿ ಜೆಡಿಎಸ್‌ನಿಂದ 2 ನಾಮಪತ್ರ ಸಲ್ಲಿಸಲಾಗಿದ್ದು, ಒಂದು ನಾಮಪತ್ರ ಶುಭಮಂಗಳ ಅವರದ್ದು ತಿರಸ್ಕೃತಗೊಂಡಿದೆ. ವಾರ್ಡ್ 11ರಲ್ಲಿ ಜೆಡಿಎಸ್‌ನಿಂದ 2 ನಾಮಪತ್ರ ಸಲ್ಲಿಸಲಾಗಿದ್ದು, ರವಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ವಾರ್ಡ್ 12ರಲ್ಲಿ ಎಸ್‌ಡಿಪಿಐ 2 ನಾಮಪತ್ರ ಸಲ್ಲಿಸಿದ್ದು, ಒಂದು ತಿರಸ್ಕೃತಗೊಂಡಿದೆ. 14ರಲ್ಲಿ ಬಿಜೆಪಿಯ ಸುನೀತಾ ಎರಡು ನಾಮಪತ್ರ ಸಲ್ಲಿಸಿದ್ದು ಒಂದು ತಿರಸ್ಕೃತ. 15ರಲ್ಲಿ ಜೆಡಿಎಸ್ 2 ನಾಮಪತ್ರ ಸಲ್ಲಿಸಿದ್ದು ಒಂದು ನಾಮಪತ್ರ ತಿರಸ್ಕೃತ. ವಾರ್ಡ್ 16ರಲ್ಲಿ ಎಸ್‌ಡಿಪಿಐ ಎರಡು ನಾಮಪತ್ರ ಸಲ್ಲಿಸಿದ್ದು ಒಂದು ನಾಮಪತ್ರ ತಿರಸ್ಕೃತಗೊಂಡಿದೆ.