ಇಂದು ಸಾಹಿತ್ಯ ಕಲರವ
ಬಂಟ್ವಾಳ: ಇಲ್ಲಿನ ಸೆರ್ಕಳ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತ್ಯ ಕಲರವ (ತೊದಲ ಭಾಷೆಗೆ ಮೊದಲ ವೇದಿಕೆ) ಎಂಬ ವಿಶಿಷ್ಟ ಕಾರ್ಯಕ್ರಮ ಜ.17ರಂದು ನಡೆಯಲಿದೆ. ಈ ಪ್ರಯುಕ್ತ ತಾಲೂಕು ಮಟ್ಟದ ಪ್ರಾಥಮಿಕ ಶಾಲೆ ಮಕ್ಕಳಿಗಾಗಿ ಸ್ವರಚಿತ ಕಥೆ, ಕವನ ಸ್ಪರ್ಧೆ ಆಯೋಜಿಸಲಾಗಿದೆ.
ಇಂದು ರಾಷ್ಟ್ರೀಯ ವಿಚಾರ ಸಂಕಿರಣ
ಮಂಗಳೂರು: ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರೈಜನ್ ರಾಷ್ಟ್ರೀಯ ಸಮಾವೇಶ ಜ.17ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ ಎಂದು ಆಸ್ಪತ್ರೆಯ ಉಪ ಮುಖ್ಯಸ್ಥ ನರಸಿಂಹನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಲಿದ್ದು, ಸಂಸ್ಥೆ ಮುಖ್ಯಸ್ಥ ಫಾ.ಪ್ಯಾಟ್ರಿಕ್ ರೋಡ್ರಿಗಸ್ ಅಧ್ಯಕ್ಷತೆ ವಹಿಸುವರು. ಡಾ.ರೋಹನ್ ಮೋನಿಸ್ ಪ್ರಧಾನ ಭಾಷಣ ಮಾಡುವರು. 20 ವಿದ್ಯಾ ಸಂಸ್ಥೆಗಳಿಂದ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ವರ್ಗ ಭಾಗಹಿಸಲಿದ್ದಾರೆ. ಜ.18ರಂದು ಸಂಜೆ 3.30ಕ್ಕೆ ಸಮಾರೋಪದಲ್ಲಿ ಮಣಿಪಾಲ ಟಿ.ಎ.ಪೈ ಮೆನೇಜ್ಮೆಂಟ್ ಅಧ್ಯಕ್ಷ ಡಾ.ಆರ್.ಸಿ.ನಟರಾಜನ್ ಭಾಗವಹಿಸುವರು ಎಂದರು.