ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಕಾರು- ಬೈಕ್ ಡಿಕ್ಕಿ: ಯುವಕ ಮೃತ

Rashmi Kasaragodu
Updated On : 17 Jan 2014, 1:04 am

ಸುಬ್ರಹ್ಮಣ್ಯ: ಪಂಜ ಸಮೀಪದ ಬಳ್ಪ ಮುಖ್ಯ ಪೇಟೆಯಲ್ಲಿ ಬೈಕ್- ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಸುದರ್ಶನ್ (23) ಮೃತರು. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಸುದರ್ಶನ್, ಬಳ್ಪದಲ್ಲಿರುವ ತನ್ನ ಅಂಗಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪಂಜ ಕಡೆಯಿಂದ ವೇಗವಾಗಿ ಬರುತ್ತಿದ್ದ ಎಣ್ಮೂರಿನ ನಿವಾಸಿ ಪಿಡಬ್ಲ್ಯ್ಲುಡಿ ಗುತ್ತಿಗೆದಾರ ಅಬ್ದುಲ್ಲಾ ಎಂಬವರ ಕಾರು ಪರಸ್ಪರ ಡಿಕ್ಕಿಯಾಯಿತು. ಸುದರ್ಶನ್ ಅವರ ಅಂಗಡಿಯ 100 ಮೀ. ದೂರದಲ್ಲಿ ಈ ಘಟನೆ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ 10 ಮೀ. ಎತ್ತರಕ್ಕೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯವಾಗಿದ್ದು, ಸುಮಾರು 20 ನಿಮಿಷಗಳ ಕಾಲ ಹೊರಳಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲು ಯಾಗೂ ಮುಂದಾಗಲಿಲ್ಲ ಎಂದು ತಿಳಿದುಬಂದಿದೆ. ಅಪಘಾತ ಸಂದರ್ಭ ಅಬ್ದುಲ್ಲಾರ ಕಾರನ್ನು ಪುತ್ರ ಚಲಾಯಿಸುತ್ತಿದ್ದ ಎನ್ನಲಾಗಿದೆ. ಆದರೆ ಕಾರಿನಿಂದ ಇಳಿದವರು ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ವ್ಯವಸ್ಥೆ ಮಾಡದೆ ನೇರವಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಮಾರ್ಗದಲ್ಲಿದ್ದ ವಾಹನ ತೆರವುಗೊಳಿಸುವ ಸಂದರ್ಭ ಆಕ್ರೋಶಿತ ಸ್ಥಳೀಯರು ತಡೆಯೊಡ್ಡಿದ ಘಟನೆ ಕೂಡ ನಡೆಯಿತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


ಕೈಕೊಟ್ಟ ಆಂಬುಲೆನ್ಸ್
ಸುಬ್ರಹ್ಮಣ್ಯದ 108 ಆಂಬುಲೆನ್ಸ್ ರಿಪೇರಿಗೆ ಹೋಗಿದ್ದು ವಾಪಸ್ ಬಾರದೆ ತಿಂಗಳುಗಳಾಗಿವೆ. ಹಾಗಾಗಿ ಗಾಯಾಳುವನ್ನು ಸ್ಥಳೀಯರು ಖಾಸಗಿ ವಾಹನದಲ್ಲಿ ಪುತ್ತೂರು ಹಾಗೂ ಮಂಗಳೂರಿಗೆ ಕೊಂಡೊಯ್ದರು. ಇತ್ತೀಚೆಗೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದದಲ್ಲಿ ನಡೆದ ವಿದ್ಯಾರ್ಥಿಗಳ ಅಪಘಾತ ಸಂದರ್ಭ ಕೂಡ 108 ಸೇವೆಗೆ ಸಿಗಲಿಲ್ಲ. ಇದೀಗ ಮತ್ತೊಮ್ಮೆ ಪುನರಾವರ್ತನೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement