ಪರ್ಯಾಯ ಹೊರೆ ಕಾಣಿಕೆ
ಪುತ್ತೂರು: ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಪರ್ಯಾಯ ಮಹೋತ್ಸವಕ್ಕೆ ಪುತ್ತೂರಿನಿಂದ ಗುರುವಾರ ಹೊರೆ ಕಾಣಿಕೆ ಸಂಗ್ರಹಿಸಿ ಕಳುಹಿಸಿಕೊಡಲಾಯಿತು. ಕಾಣಿಯೂರಿನಿಂದ ಹೊರಟ ಮೆರವಣಿಗೆಯನ್ನು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಶ್ವ ಪುಂಡಿತ್ತೂರು ಸ್ವಾಗತಿಸಿ ದೇವಳದ ವತಿಯಿಂದ ಪ್ರಸಾದ ನೀಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ, ಟಿ. ರಂಗನಾಥ ರಾವ್, ಪದ್ಮಯ್ಯ ಗೌಡ ಅನಿಲ, ವಸಂತ ಗೌಡ ಕಂಪ, ಸತೀಶ್ ಕೆದಿಲಾಯ, ಸುಬ್ರಹ್ಮಣ್ಯ ಕಲ್ಲೂರಾಯ, ನಾಗರಾಜ್ ನಿಡ್ವಣ್ಣಯ, ಗೋವರ್ಧನ ಪೆಜತ್ತಾಯ, ಗಣೇಶ್ ಕೇಕುಣ್ಣಾಯ ಉಪಸ್ಥಿತರಿದ್ದರು.