ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪರ್ಯಾಯೋತ್ಸವಕ್ಕೆ ಹೊರೆಕಾಣಿಕೆ

Rashmi Kasaragodu
Updated On : 17 Jan 2014, 12:47 pm

ಮೂಲ್ಕಿ: ಜ.18ರಂದು ಉಡುಪಿಯಲ್ಲಿ ಜರುಗಲಿರುವ ಪಯಾರ್ಯೋತ್ಸವಕ್ಕೆ ಕಟೀಲು, ಬಜಪೆ, ಕಿನ್ನಿಗೋಳಿ, ಮೆನ್ನಬೆಟ್ಟು ಪರಿಸರಗಳಿಂದ ಹಸಿರು ಹೊರೆಕಾಣಿಕೆ ಮೆರವಣಿಗೆಯು ಕಟೀಲಿನ ಶ್ರೀ ದುರ್ಗಾಪರಮೇಶ್ವರಿ ದೇವಳದಿಂದ ಹೊರಟು ಕಿನ್ನಿಗೋಳಿ ಮೂಲಕ ಮೂಲ್ಕಿಗೆ ಆಗಮಿಸಿತು.
ಇದೇ ವೇಳೆ ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಳದಿಂದ ಹೊರಟ ಹೊರೆಕಾಣಿಕೆ ಮೆರವಣೆಗೆಯು ಮೂಲ್ಕಿಗೆ ಆಗಮಿಸಿ ಬಳಿಕ ಜೊತೆಯಾಗಿ ಉಡುಪಿಗೆ ಸಾಗಿತು.
ಮೂಲ್ಕಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮೆರವಣಿಗೆಯನ್ನು ಸ್ವಾಗತಿಸಿದರು. ಶ್ರೀಕ್ಷೇತ್ರ ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಕೆ. ಭುವನಾಭಿರಾಮ ಉಡುಪ, ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಳದ ರಾಘವೇಂದ್ರ ಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement