ಪಿ.ಸಿ. ಮಲ್ಲಪ್ಪ ಆಂಡ್ ಕೋ ಸ್ಯಾನಿಟರಿ ಮಳಿಗೆ ಆರಂಭ
ಮಂಗಳೂರು: ವಿಶ್ವದ ಪ್ರಖ್ಯಾತ ಬ್ರಾಂಡ್ಗಳ ಟೈಲ್ಸ್, ಬಾತ್ ಫಿಟ್ಟಿಂಗ್ಸ್ನ ಮಾರಾಟದ ಪಿ.ಸಿ. ಮಲ್ಲಪ್ಪ ಆ್ಯಂಡ್ ಕೊ ಮಳಿಗೆ ಬುಧವಾರ ಕಂಕನಾಡಿ ಬೈಪಾಸ್ ರಸ್ತೆಯ ಇನ್ಲ್ಯಾಂಡ್ ಗ್ಯಾಲೋರ್ನಲ್ಲಿ ಉದ್ಘಾಟನೆಗೊಂಡಿದೆ.
ಇನ್ಲ್ಯಾಂಡ್ ಎಂಡಿ ಸಿರಾಜ್ ಅಹಮ್ಮದ್ ಮಳಿಗೆ ಉದ್ಘಾಟಿಸಿದರು.
ಬೆಳೆಯುತ್ತಿರುವ ನಗರಕ್ಕೆ ವಿಶ್ವಮಟ್ಟದ ಸ್ಯಾನಿಟರಿ ಮಳಿಗೆ ಅಗತ್ಯವಾಗಿತ್ತು. ಬಿಲ್ಡರ್ಗಳು ಬೇರೆ ಕಡೆಯಿಂದ ತರಬೇಕಾದ ಅನಿವಾರ್ಯತೆ ಇತ್ತು. ಮಂಗಳೂರಲ್ಲಿಯೇ ಆರಂಭವಾಗಿರುವುದು ಖುಷಿ ವಿಚಾರ ಎಂದರು.
ಕ್ರೆಡೈ ಮಂಗಳೂರು ಘಟಕ ಅಧ್ಯಕ್ಷ ಪುಷ್ಪರಾಜ್ ಜೈನ್, ಪಿ.ಸಿ.ಮಲ್ಲಪ್ಪ ವಿನ್ಯಾಸಗಾರ ಜ್ಞಾನೇಶ್, ಪ್ರಾಪರ್ಟಿ ಸಂಸ್ಥೆಯ ರೋಹನ್ ಮೊಂತೆರೋ, ಲ್ಯಾಂಡ್ಲಿಂಕ್ಸ್ನ ಕೃಷ್ಣ ಜೆ.ಪಾಲೆಮಾರ್, ಸತೀಶ್ ಇದ್ದರು.
3 ಮಹಡಿಗಳ ಈ ಮಳಿಗೆ ಸಂಪೂರ್ಣ ಹವಾನಿಯಂತ್ರಿತ. ವಿಶ್ವಪ್ರಸಿದ್ಧ ಬ್ರಾಂಡ್ಗಳಾದ ಹ್ಯಾಂಗ್ಸ್ ಗ್ರೋಹ್, ಟೂಟೋ, ಹಿಂಡ್ವ್ಯಾರ್, ಕಜಾರಿಯ, ಜಾನ್ಸನ್ ಟೊಕ್ಕೊ ಇನ್ನಿಂತರ ಸಂಸ್ಥೆಗಳ ಉಪಕರಣಗಳು ಲಭ್ಯ ಇದೆ.