ಭವಿಷ್ಯ ನಿಧಿ ಸಂಸ್ಥೆಯಿಂದ ಸೂಚನೆ
ಮಂಗಳೂರು: ಕಾರ್ಮಿಕರ ಭವಿಷ್ಯನಿಧಿ ಕಾಯ್ದೆಗೊಳಪಟ್ಟ ಸಂಸ್ಥೆಗಳ ಕೆಲವು ಉದ್ಯೋಗದಾತರು ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಡ್ರಾಪ್ ಬಾಕ್ಸ್ನಲ್ಲಿ ಹಾಕಿರುವ ಚೆಕ್ ಮತ್ತು ಡ್ರಾಫ್ಟ್ಗಳಿಗೆ ರಶೀದಿ ನೀಡದಿರುವುದು ಮತ್ತು ತಡವಾಗಿ ಪರಿಶೀಲನೆ ಆಗಿರುವುದರಿಂದ ಉದ್ಯೋಗದಾತರಿಗೆ ಎಸ್ಬಿಐ ಅನವಶ್ಯಕ ದಂಡ ಮತ್ತು ಬಡ್ಡಿ ವಿಧಿಸಿರುವುದನ್ನು ಕೇಂದ್ರಿಯ ಭವಿಷ್ಯನಿಧಿ ಆಯುಕ್ತ ಕೆ.ಕೆ. ಜಲನ್ ಪ್ರಶ್ನಿಸಿದ್ದಾರೆ. ಎಸ್ಬಿಐ ಅಧ್ಯಕ್ಷರೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿದ ಆಯುಕ್ತರು ಎಸ್ಬಿಐ ಎಲ್ಲ ಶಾಖೆಗಳು ಸ್ವೀಕರಿಸುವ ಭವಿಷ್ಯನಿಧಿಗೆ ಸಂಬಂಧಪಟ್ಟ ಚೆಕ್ಗಳಿಗೆ ಸೂಕ್ತ ಸ್ವೀಕೃತಿ ಪತ್ರ ನೀಡುವಂತೆ ಸೂಚಿಸಿದರು. ಉದ್ಯೋಗದಾತರು ಈ ಕುರಿತು ಸಮಸ್ಯೆಯನ್ನು ಎದುರಿಸಿದರೆ ಭವಿಷ್ಯನಿಧಿ ಪ್ರಾದೇಶಿಕ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.