ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ವಿವಿಧ ಕಳವು ಪ್ರಕರಣ ಆರೋಪಿಗಳ ಸೆರೆ; ಸೊತ್ತು ವಶಕ್ಕೆ

Rashmi Kasaragodu
Updated On : 17 Jan 2014, 1:05 am

ಬೆಳ್ತಂಗಡಿ: ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕಿನ ವಿವಿಧೆಡೆ ನಡೆದ ಕಳವು ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು ಇವರಿಂದ ಸುಮಾರು ರು. 10 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. ಪಡಂಗಡಿ ನಿವಾಸಿ ಹಮೀದ್ (38), ಕುವೆಟ್ಟು ಗ್ರಾಮದ ಮಹಮ್ಮದ್ ಇಸಾಕ್ (28) ಬಂಧಿತರು. ಇವರಿಂದ ಕಳವು ಮಾಡಿದ ಅಡಕೆ, ಕೃತ್ಯಕ್ಕೆ ಬಳಸಿದ ವ್ಯಾನ್, ಕಾರು ವಶ ಪಡಿಸಿಕೊಳ್ಳಲಾಗಿದೆ. ಇವರು ಮದ್ದಡ್ಕ ಹಾಗೂ ತೋಟತ್ತಾಡಿ ಹಾಲು ಉತ್ಪಾದಕರ ಸಂಘದಿಂದ ನಗದು ಕಳವು, ಬೆಳ್ತಂಗಡಿ ಫಾರೂಕ್, ಗೇರುಕಟ್ಟೆ ಅಬ್ದುಲ್ ಕರೀಂ, ವೇಣೂರಿನ ಸುರೇಶ್ ಮೂಲ್ಯ, ಪುತ್ತೂರು ತಾಲೂಕು ನೆಲ್ಯಾಡಿಯ ಅರವಿಂದ ಟ್ರೇಡರ್ಸ್, ಅಲಂಕಾರಿನ ಎವನ್ ಟ್ರೇಡರ್ಸ್, ಬಂಟ್ವಾಳ ತಾಲೂಕಿನ ಕಕ್ಯೆಪದವು ಇಸಾಕ್ ಅಂಗಡಿಗಳಿಂದ ಅಡಕೆ ಕದ್ದಿದ್ದಾಗಿ ಹೇಳಲಾಗಿದೆ. ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಪೆಟ್ರೋಲ್ ಬಂಕ್‌ನಿಂದ ನಗದು ಕದ್ದಿದ್ದರು. ಆರೋಪಿಗಳನ್ನು ಇತ್ತೀಚೆಗೆ, ಗುರುವಾಯನಕೆರೆ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಹಿನ್ನಲೆಯಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಬಹಿರಂಗಗೊಂಡಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ.ಆರ್. ಲಿಂಗಪ್ಪ, ಎಸ್‌ಐ ಪ್ರಕಾಶ್ ದೇವಾಡಿಗ, ವೇಣೂರು ಅಬ್ದುಲ್ ಖಾದರ್ ತಂಡ ಪ್ರಕರಣ ಭೇದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement