ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸಂಜೆ ಕೃಷ್ಣ ಮಠದಲ್ಲಿ ಸೂರೆಯಾಯಿತು...!

Rashmi Kasaragodu
Updated On : 18 Jan 2014, 1:34 am

ಉಡುಪಿ: ಉಡುಪಿ ಕೃಷ್ಣಮಠದ ಅನ್ನಛತ್ರ ಶುಕ್ರವಾರ ಸಂಜೆ ವೇಳೆ ಸೂರೆಯಾಯಿತು!
 ಮಧ್ಯಾಹ್ನದ ಅನ್ನಪ್ರಸಾದ (ಸಾರ್ವಜನಿಕ ಭೋಜನ) ಮುಗಿದ ತಕ್ಷಣ ನೂರಾರು ಸಂಖ್ಯೆಯಲ್ಲಿ ಧಾವಿಸಿ ಬಂದ ಜನರು ಅನ್ನಛತ್ರದಲ್ಲಿದ್ದ ಅನ್ನ, ಭಕ್ಷ್ಯ, ಸಾಂಬಾರು ಪದಾರ್ಥಗಳನ್ನು ಲೂಟಿ ಮಾಡಿದರು. ಅವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚಿತ್ತು!
 ಕೆಲವರು ಈ ಲೂಟಿಗೆ ಮೊದಲೇ ತಯಾರಿ ಎಂಬಂತೆ ಪಾತ್ರೆ ಇತ್ಯಾದಿಗಳನ್ನು ತಂದಿದ್ದರು, ಇನ್ನು ಕೆಲವು ಅಲ್ಲಿದ್ದ ಸಣ್ಣಪುಟ್ಟ ಪಾತ್ರೆಗಳಲ್ಲಿ ತಮಗೆ ಬೇಕಾದ ಸಾರು, ಸಾಂಬಾರು, ಪಾಯಸ ಇತ್ಯಾದಿಗಳನ್ನು ತುಂಬಿಸಿಕೊಂಡು ಓಟ ಕಿತ್ತರು.
ಇದು ಪರಂಪರೆ: ಇದು ಪರ್ಯಾಯೋತ್ಸವದ ಸೂರೆ ಕಾರ್ಯಕ್ರಮ. ಇದು ಶತಮಾನಗಳಿಂದ ನಡೆದು ಬಂದಿರುವ ಪದ್ಧತಿ. ಪರ್ಯಾಯ ಪೀಠದಿಂದ ನಿರ್ಗಮಿಸುವ ಮಠಾಧೀಶರು ಕೃಷ್ಣಮಠದಲ್ಲಿ ಪರ್ಯಾಯಕ್ಕೆ ಮುನ್ನಾದಿನ ಹತ್ತಾರು ಸಾವಿರ ಜನರಿಗೆ ಕೊನೆಯ ಅನ್ನದಾನ ನಡೆಸುತ್ತಾರೆ. ಎಲ್ಲರ ಊಟ ಮುಗಿದ ನಂತರ ಉಳಿದ ಅನ್ನ, ಸಾರು, ಸಾಂಬಾರು, ಸಿಹಿಭಕ್ಷ್ಯ, ಪಾಯಸ, ತೆಂಗಿನ ಕಾಯಿ, ಅಕ್ಕಿ, ತರಕಾರಿ, ಸಾಂಬಾರ ಪದಾರ್ಥಗಳನ್ನು ಬೇಕಾದವರು ಬೇಕಾದಷ್ಟು ಪ್ರಮಾಣದಲ್ಲಿ ಉಚಿತವಾಗಿ ಕೊಂಡೊಯ್ಯುವುದಕ್ಕೆ ಅವಕಾಶ ನೀಡಲಾಗುತ್ತದೆ. ಇದನ್ನೇ ಸೂರೆ ಎನ್ನಲಾಗುತ್ತದೆ. ಸೂರೆಯ ನಂತರ ನಿರ್ಗಮನ ಮಠದವರು ಮಠದಲ್ಲಿ ಉಳಿದ ಬೆಲೆಬಾಳುವ ಸೊತ್ತುಗಳನ್ನು ತಮ್ಮ ಮೂಲಮಠಕ್ಕೆ ತೆಗೆದುಕೊಂಡು ಹೋಗುತ್ತಾರೆ. ನಿರ್ಗಮನ ಮಠದವರು ಹೋಗಿರುತ್ತಾರೆ, ಹೊಸ ಮಠದವರು ಬಂದಿರುವುದಿಲ್ಲ, ಆದ್ದರಿಂದ ಸಂಜೆ ವೇಳೆಗೆ ಕೃಷ್ಣ ಮಠ ಖಾಲಿಖಾಲಿಯಾಗಿರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement