ಇಂದಿನಿಂದ ಉಸ್ತುವಾರಿ ಸಚಿವ ರೈ ಪ್ರವಾಸ
ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಜ.19 ರಂದು ಮಂಗಳೂರಿಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 8.30ಕ್ಕೆ ವೆನ್ಕ್ ಆಸ್ಪತ್ರೆಯಲ್ಲಿ ಜಿಲ್ಲಾ ಮಟ್ಟದ ಪಲ್ಸ್ ಪೊಲೀಯೋ ಉದ್ಘಾಟಿಸುವರು. ಬೆಳಗ್ಗೆ 9.30 ಗಂಟೆಗೆ ಪಂಜಿಕಲ್ಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಪದಗ್ರಹಣದಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 10.30 ಗಂಟೆಗೆ ಪಾಣೆಮಂಗಳೂರು ಎಸ್ಎಸ್ಎಫ್ ವತಿಯಿಂದ ನಡೆಯುವ ರಕ್ತದಾನ ಶಿಬಿರಕ್ಕೆ ಚಾಲನೆ ನೀಡುವರು. ಮಧ್ಯಾಹ್ನ 2.30 ಗಂಟೆಗೆ ಪಜೀರು ಮಸೀದಿಯ ಉದ್ಘಾಟಿಸುವರು. ಮಧ್ಯಾಹ್ನ 3.30 ಗಂಟೆಗೆ ಮೂಡುಬಿದಿರೆ ಆಥ್ಲೆಟಿಕ್ ಟ್ರ್ಯಾಕ್ ಕಮಗಾರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4.30 ಗಂಟೆಗೆ ಹೊಳ್ಮರಬೈಲು ಕಾಂಕ್ರೀಟು ರಸ್ತೆ ಉದ್ಘಾಟಿಸುವರು. ಸಂಜೆ 6.30 ಸೆಬಾಸ್ಟಿಯನ್ ಚರ್ಚ್ ಶತಮಾನೋತ್ಸವದಲ್ಲಿ ಭಾಗವಹಿಸುವರು. ರಾತ್ರಿ 8 ಗಂಟೆಗೆ ಪಣೋಲಿಬೈಲು ಫ್ರೆಂಡ್ ವತಿಯಿಂದ ಹಗ್ಗ ಜಗ್ಗಾಟ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸುವರು.