ನಾಳೆ ಇಸ್ಕಾನ್ ರಥಯಾತ್ರೆ
ಮಂಗಳೂರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ(ಇಸ್ಕಾನ್)ಆಶ್ರಯದಲ್ಲಿ 20ರಂದು ನಗರದಲ್ಲಿ ರಥ ಯಾತ್ರೆ ನಡೆಯಲಿದೆ ಎಂದು ಇಸ್ಕಾನ್ ಪ್ರಮುಖ ಶ್ರೀವತ್ಸದಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸಂಜೆ 4ಕ್ಕೆ ಸಿವಿ ನಾಯಕ್ ಹಾಲ್ ಎದುರು ರಥಯಾತ್ರೆ ಪ್ರಾರಂಭವಾಗಲಿದೆ. ಇಸ್ಕಾನ್ ಕರ್ನಾಟಕ ಮತ್ತು ದಕ್ಷಿಣ ಭಾರತ ಆಡಳಿತ ಮಂಡಳಿ ಆಯುಕ್ತ ಭಾನು ಸ್ವಾಮಿ ಮಹಾರಾಜ್ ರಥಯಾತ್ರೆ ಉದ್ಘಾಟಿಸುವರು. ಇಸ್ಕಾನ್ ರಾಜ್ಯ ಘಟಕ ಕಾರ್ಯದರ್ಶಿ ಶಂಖಧಾರಿ ದಾಸ, ಇಸ್ಕಾನ್ ಚೌಪಾಟಿ ಕೌನ್ಸಿಲ್ ಸದಸ್ಯ ದಯಾಳ್ಚಂದ್ರ ದಾಸ ಪಾಲ್ಗೊಳ್ಳುವರು. ರಥಯಾತ್ರೆ ಸಿವಿ ನಾಯಕ್ ಹಾಲ್, ಬಂಟ್ಸ್ಹಾಸ್ಟೆಲ್, ಅಂಬೇಡ್ಕರ್ ವೃತ್ತ, ಹಂಪನಕಟ್ಟೆ, ಕೆಎಸ್ರಾವ್ ವೃತ್ತ, ಸಿಟಿ ಪಾಯಿಂಟ್, ಬಂಟ್ಸ್ಹಾಸ್ಟೆಲ್ ಸರ್ಕಲ್ಗೆ ಮರಳುವುದು. ರಾತ್ರಿ 7.30ರಿಂದ ಬಂಟ್ಸ್ಹಾಸ್ಟೆಲ್ನ ಜಗನ್ನಾಥ ಮಂದಿರದಲ್ಲಿ ಪ್ರಸಾದ ವಿತರಣೆ ನೆರವೇರಲಿದೆ ಎಂದರು.