ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಳದಂಗಡಿ: ದೇವಸ್ಥಾನ ವರ್ಷಾವಧಿ ಜಾತ್ರೆ

Mainashree
Updated On : 20 Jan 2014, 11:31 am

ಬೆಳ್ತಂಗಡಿ: ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಮಂಗಳವಾರದಿಂದ ಪ್ರಾರಂಭವಾಗಿದ್ದು, 20 ರಂದು ಬೆಳಗ್ಗೆ ದೇವರ ದಿವ್ಯದರ್ಶನ, ಕಲಶಾಭಿಷೇಕ, ಅಲಂಕಾರ ಪೂಜೆ, ಮಹಾಪೂಜೆ ನಡೆಯಲಿದೆ. ರಾತ್ರಿ ಭಜನೆ, ದೇವರ ಮಹೋತ್ಸವ, ವಸಂತಕಟ್ಟೆ ಪೂಜೆ, ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಕೊಡಮಣಿತ್ತಾಯ ದೈವದ ನೇಮ, ದೈವ ದೇವರ ಭೇಟಿ ನಡೆಯಲಿದೆ. ರಾತ್ರಿ ಗಂಟೆ 7.30ರಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಹರಿದಾಸ್ ಡೋಗ್ರ ಪುತ್ತೂರು ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ. ರಾತ್ರಿ ಗಂಟೆ 8.30 ರಿಂದ ದ.ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಬಡಗಕಾರಂದೂರು ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ರಾತ್ರಿ ಗಂಟೆ 11 ರಿಂದ ಸತ್ಯದೇವತಾ ಕಲಾ ತಂಡ ಇವರಿಂದ ವಿ.ಎನ್.ಕುಲಾಲ್ ವೇಣೂರು ವಿರಚಿತ ನಾಟಕ ಸಂಬಂಧ ದಾಯೆ  ಪ್ರದರ್ಶನಗೊಳ್ಳಲಿದೆ. ರಾತ್ರಿ 9 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಈ ವೇಳೆ ಪ್ರಸಿದ್ಧ ಕಂಬಳ ಓಟಗಾರರಾದ ರವಿ ಕುಮಾರ್ ಅಳದಂಗಡಿ ಮತ್ತು ಗಿನ್ನಿಸ್ ದಾಖಲೆ ಮಾಡಿರುವ ಕೋಡಿಕನ್ಯಾನದ ಗೋಪಾಲ ಖಾರ್ವಿ ಅವರನ್ನು ಅಭಿನಂದಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement