ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜಾತ್ರೋತ್ಸವದ ದಿನವೇ ಮುಗೇರಡ್ಕ ದೈವಸ್ಥಾನ ಮುಜರಾಯಿ ವಶಕ್ಕೆ

Mainashree
Updated On : 20 Jan 2014, 11:31 am

ಉಪ್ಪಿನಂಗಡಿ: ಪುರಾತನ ಕಾರಣಿಕವಾದ ದೈವ ಕ್ಷೇತ್ರವೆಂದೇ ಪರಿಗಣಿಸಲ್ಪಟ್ಟ ಮೊಗ್ರು ಗ್ರಾಮದ ಮುಗೇರಡ್ಕ ದೈವಸ್ಥಾನವನ್ನು ದ.ಕ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮುಜರಾಯಿ ಇಲಾಖಾಧಿಕಾರಿಗಳು ಮುಜರಾಯಿ ಇಲಾಖಾ ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸ್ ರಕ್ಷಣೆಯೊಂದಿಗೆ ಕ್ಷೇತ್ರಕ್ಕೆ ಭೇಟಿ ನೀಡಿದ ಮುಜರಾಯಿ ಇಲಾಖಾಧಿಕಾರಿ ಸುಧಾಕರ್ ದೈವಸ್ಥಾನದ ಎಲ್ಲಾ ಕಾಣಿಕೆ ಡಬ್ಬಿಗಳಿಗೆ ಇಲಾಖೆ ಮೊಹರ್ ಹಾಕಿ ಸೀಲ್ ಹಾಕಿದ್ದಾರೆ.
ದೈವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕೆಂದು ಸ್ಥಳೀಯ ನಿವಾಸಿಗಳ ತಂಡವೊಂದು ಜಿಲ್ಲಾಧಿಕಾರಿಗಳಿಗೆ 2000ನೇ ಇಸವಿಯಲ್ಲಿ ಮನವಿ ಸಲ್ಲಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯವು ದೈವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಬೇಕೆಂದು 2013ರ ಅ.25ರಂದು ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಮುಜರಾಯಿ ಇಲಾಖಾಧಿಕಾರಿಗಳು ದೈವಸ್ಥಾನವನ್ನು ಇಲಾಖೆ ವ್ಯಾಪ್ತಿಗೆ ತರುವ ಕ್ರಮಕ್ಕೆ ಮುಂದಾದರು.
ಗೊಂದಲದ ನಡುವೆಯೇ ಜಾತ್ರೆ: ದೈವಸ್ಥಾನದಲ್ಲಿ ಜ.18ರಿಂದ 23ರವರೆಗೆ ಜಾತ್ರಾ ಮಹೋತ್ಸವಾಗಿದ್ದು, ಮೊದಲ ದಿನವೇ ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಟ್ಟ ಹಿನ್ನೆಲೆಯಲ್ಲಿ ದೈವಸ್ಥಾನದ ಕಾರ್ಯಚಟುವಟಿಕೆಗೆ ಸೂತಕದ ಛಾಯೆ ಮೂಡಿದಂತಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement