ನಾಳೆ ಕರಾವಳಿ ಕುಸ್ತಿ
ಮಂಗಳೂರು: ಜಿಲ್ಲಾ ಮಟ್ಟದ ಕರಾವಳಿ ಕೇಸರಿ ಮತ್ತು ಕರಾವಳಿ ಕುಮಾರ್ ಕುಸ್ತಿ ಪಂದ್ಯಾಟ ಜ.21ರಂದು ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಎಂದು ದ.ಕ.ಜಿಲ್ಲಾ ಕುಸ್ತಿ ಸಂಘ ಉಪಾಧ್ಯಕ್ಷ ಸತೀಶ್ ರಾವ್ ಬೋಳಾರ ತಿಳಿಸಿದರು. ಬೆಳಗ್ಗೆ 9.30ಕ್ಕೆ ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ ಉದ್ಘಾಟಿಸಲಿದ್ದು, ಸಂಜೆ 6ಕ್ಕೆ ಶಾಸಕ ಜೆ.ಆರ್.ಲೋಬೋ ಅಧ್ಯಕ್ಷತೆಯಲ್ಲಿ ಸಮಾರೋಪ ಜರುಗಲಿದೆ. ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ, ವೈಟ್ಲಿಫ್ಟಿಂಗ್ ಏಕಲವ್ಯ ಪ್ರಶಸ್ತಿ ವಿಜೇತ ಪುಷ್ಪರಾಜ್ ಹೆಗ್ಡೆ, ಬೋಳೂರು ವೀರಮಾರುತಿ ವ್ಯಾಯಾಮಶಾಲೆಯ ಬ್ಯಾಟ್ರಿಕ್ ತುಳುಕೇಸರಿ ಕುಸ್ತಿ ವಿಜೇತ ಭುಜಂಗ ಬೋಳಾರರನ್ನು ಸನ್ಮಾನಿಸಲಾಗುವುದು. ವಿವರಕ್ಕೆ 9449237733.