ಪೋಲಿಯೊ ಲಸಿಕೆ: ಶೇ.89 ಸಾಧನೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಭಾನುವಾರ ಪಲ್ಸ್ ಪೊಲಿಯೋ ಶೇ.89.61 ಲಸಿಕೆ ಹಾಕಲಾಗಿದೆ. ಒಟ್ಟು 1,68,336 ಮಕ್ಕಳ ಪೈಕಿ 1,50,842 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೋ ಪುಟಾಣಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಇಬ್ರಾಹಿಂ, ರೋಟರಿ ಅಧ್ಯಕ್ಷ ರಾಜಗೋಪಾಲ ರೈ, ರೋಟರಿ ಮಾಜಿ ರಾಜ್ಯಪಾಲ ದೇವದಾಸ ರೈ, ಮಾಜಿ ಅಧ್ಯಕ್ಷ ರೇವಣ್ಕರ್, ಕಾರ್ಯರ್ಶಿ ಸಂತೋಷ್ ಶೇಟ್ ಮತ್ತಿತರರಿದ್ದರು.
ಪುತ್ತೂರಿನಲ್ಲಿ ಶೇ.97 ಗರಿಷ್ಠ, ಮಂಗಳೂರು ಶೇ.82, ಬೆಳ್ತಂಗಡಿ ಶೇ.96, ಬಂಟ್ವಾಳ ಶೇ.93 ಹಾಗೂ ಸುಳ್ಯ ಶೇ.94.93 ಸಾಧನೆ ದಾಖಲಾಗಿದೆ. ಉಳಿದ 18 ಸಾವಿರ ಮಕ್ಕಳಿಗೆ ನಗರ ಪ್ರದೇಶದಲ್ಲಿ 3 ದಿನ ಹಾಗೂ ಗ್ರಾಮಾಂತರದಲ್ಲಿ 2 ದಿನದಲ್ಲಿ ಮನೆ ಮನೆಗೆ ತೆರಳಿ ಪೊಲಿಯೊ ಹನಿ ಹಾಕಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ತಿಳಿಸಿದ್ದಾರೆ.