ವರ್ಧಮಾನ ಸಾಹಿತ್ಯ ಪ್ರಶಸ್ತಿ: ಕೃತಿಗಳಿಗೆ ಆಹ್ವಾನ
ಕಳೆದ 33 ವರ್ಷಗಳಿಂದ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡಬಿದ್ರೆಯ ಸಾಹಿತ್ಯ ಪ್ರಶಸ್ತಿ ಪೀಠವು ಈ ಬಾರಿಯ ಪ್ರಶಸ್ತಿಗಾಗಿ...
ಮೂಡಬಿದ್ರೆ: ಕಳೆದ 33 ವರ್ಷಗಳಿಂದ ವರ್ಧಮಾನ ಸಾಹಿತ್ಯ ಪ್ರಶಸ್ತಿಗಳನ್ನು ನೀಡುತ್ತಾ ಬಂದಿರುವ ಮೂಡಬಿದ್ರೆಯ ಸಾಹಿತ್ಯ ಪ್ರಶಸ್ತಿ ಪೀಠವು ಈ ಬಾರಿಯ ಪ್ರಶಸ್ತಿಗಾಗಿ 2008ರಲ್ಲಿ ಪ್ರಥಮಾವೃತ್ತಿಯಾಗಿ ಪ್ರಕಟವಾದ ಕನ್ನಡ ಸಾಹಿತ್ಯದ ಯಾವುದೇ ಪ್ರಕಾರದ (ಕಾವ್ಯ, ಕಾದಂಬರಿ, ನಾಟಕ, ಸಣ್ಣಕತೆ, ವಿಮರ್ಶೆ ಇತ್ಯಾದಿ) ಸಾಹಿತ್ಯ ಕೃತಿಗಳನ್ನು ಪರಿಶೀಲನೆಗಾಗಿ ಆಹ್ವಾನಿಸಿದೆ.
ಪ್ರಶಸ್ತಿಯು ಗೌರವ ಸಂಭಾವನೆ, ಪ್ರಶಸ್ತಿ ಪತ್ರ, ಸನ್ಮಾನವನ್ನು ಒಳಗೊಂಡಿದ್ದು, ವರ್ಧಮಾನ ಸಾಹಿತ್ಯ ಪ್ರಶಸ್ತಿಯು ಹಿರಿಯ ಸಾಹಿತಿಗಳ ಕೃತಿಗೆ ಮೀಸಲಿದ್ದರೆ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯು ತಮ್ಮ ಮೊದಲನೆಯ, ಎರಡನೆಯ ಇಲ್ಲವೇ ಮೂರನೆಯ ಕೃತಿಯ ಮೂಲಕ ಮಹತ್ವದ್ದನ್ನು ಸಾಧಿಸಿದ ಹೊಸ ಪೀಳಿಗೆಯ ಸಾಹಿತಿಗಳಿಗೆ. ಆಸಕ್ತರು ಮತ್ತು ಸಾಹಿತಿಗಳು ಕೃತಿಯ 3 ಪ್ರತಿಗಳನ್ನು ಫೆಬ್ರವರಿ 28, 2014ರೊಳಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು. ಮುನಿರಾಜ ರೆಂಜಾಳ, ಸಹ ನಿರ್ದೇಶಕರು, ವರ್ಧಮಾನ ಸಾಹಿತ್ಯ ಪ್ರಶಸ್ತಿ ಪೀಠ, ಜೆ.ಜೆ. ಕಾಲೇಜು ಮೂಡಬಿದ್ರೆ. ದ.ಕ. 574227. ದೂ. 944 9936232.