ಸುದ್ದಿ ಸಂಕ್ಷೇಪ
23ರಂದು ಸ್ಥಾಪಕರ ದಿನಾಚರಣೆ
ಮೂಲ್ಕಿ: ಇಲ್ಲಿನ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಯ ಸ್ಥಾಪಕರ ದಿನಾಚರಣೆಯು ಜ.23ರಂದು ಜರುಗಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯಧೀಶ್ ಅಮೀನ್ ಕೊಕ್ಕರ್ಕಲ್ ವಹಿಸಲಿದ್ದಾರೆ. ಸೈಂಟ್ ಆನ್ಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಎರಿಕ್ ಸಿ. ಲೋಬೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
'ರಾಜಮುದ್ರೆ ಒದಗಿ ಬರಲಿದೆ': ಮಾಜಿ ಮುಖ್ಯಮಂತ್ರಿ ಡೀವಿಗೆ ದೈವಗಳ ಅಭಯ
ಸುಳ್ಯ: ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದ ಗೌಡರ ತರವಾಡು ಮನೆ ದೇವರಗುಂಡದಲ್ಲಿ ಭಾನುವಾರ ದೈವಗಳ ನೇಮೋತ್ಸವದಲ್ಲಿ 'ರಾಜಮುದ್ರೆ ಒದಗಿ ಬರಲಿದೆ' ಎಂದು ಅವರಿಗೆ ದೈವ ಅಭಯ ನೀಡಿದೆ. ವರ್ಷಂಪ್ರತಿ ನಡೆಯುವ ದೈವಗಳ ನೇಮೋತ್ಸವದಲ್ಲಿ ರಕ್ತೇಶ್ವರಿ ದೈವ, ವಿಷ್ಣುಮೂರ್ತಿ ದೈವ ಮತ್ತು ಪೊಟ್ಟ ಭೂತಗಳ ನೇಮ ನಡೆಯಿತು. ಡಿ.ವಿ.ಸದಾನಂದ ಗೌಡರಿಗೆ ಅಭಯ ನೀಡಿದ ವಿಷ್ಣು ಮೂರ್ತಿ ದೈವ, ಇನ್ನು ಮುಂದೆ ಕೂಡಾ ನಿಮಗೆ ರಾಜಮುದ್ರೆ ಬರಲಿದೆ ಎಂದು ಹೇಳಿದೆ. ತರವಾಡು ಮನೆಯಲ್ಲಿ ನಡೆದ ನೇಮೋತ್ಸವದಲ್ಲಿ ಕುಟುಂಬಸ್ಥರು, ಊರವರು ಬಂಧು ಮಿತ್ರರು ಪಾಲ್ಗೊಂಡಿದ್ದರು.