ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಎತ್ತಿನಹೊಳೆ ಯೋಜನೆ ವಿರುದ್ಧ 24ರಂದು ನದಿಗೆ ಇಳಿದು ಪ್ರತಿಭಟನೆ

Mainashree
Updated On : 22 Jan 2014, 2:19 am

ಮಂಗಳೂರು: ನೇತ್ರಾವತಿ ನದಿ ತಿರುವು(ಎತ್ತಿನ ಹೊಳೆ)ಯೋಜನೆ ವಿರುದ್ಧ ನೇತ್ರಾವತಿ ನದಿಗಿಳಿದು ಪ್ರತಿಭಟನೆಗೆ ನದಿ ತಿರುವು ಯೋಜನೆಯ ವಿರೋಧಿ ಹೋರಾಟ ಸಮಿತಿ ತೀರ್ಮಾನಿಸಿದೆ. ಜ.24ರಂದು ಬೆಳಗ್ಗೆ 9ಕ್ಕೆ ಉಪ್ಪಿನಂಗಡಿ ನೇತ್ರಾವತಿ ಕುಮಾರಧಾರ ಸಂಗಮ ನದಿ ತಟದಲ್ಲಿ ನೀರಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೋರಾಟ ಸಮಿತಿ ಸಂಚಾಲಕ ಡಾ.ನಿರಂಜನ್ ರೈ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜು ಉಪನ್ಯಾಸಕ ಡಾ.ಶ್ರೀಶ ಕುಮಾರ್ ದಿಕ್ಸೂಚಿ ಭಾಷಣ ಮಾಡುವರು ಎಂದರು.
 ಜ.31ರಂದು ಎತ್ತಿನಹೊಳೆ ಯೋಜನೆಗೆ ಶಿಲಾನ್ಯಾಸ ಮಾಡುವ ದಿನದಂದು ಕರಾಳ ದಿನ ಆಚರಿಸಲಾಗುವುದು. ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಎತ್ತಿನಹೊಳೆ ಯೋಜನೆಯನ್ನು ಖಂಡಿತವಾಗಿ ಜಾರಿಗೊಳಿಸುತ್ತೇವೆ ಎಂಬ ಹೇಳಿಕೆ ನೀಡಿದ್ದು, ಕರಾವಳಿಯ ಜನರ ಪರವಾಗಿ ಇದನ್ನು ಖಂಡಿಸುದಲ್ಲದೆ ಪ್ರತ್ಯೇಕ ತುಳು ರಾಜ್ಯ ಬೇಡಿಕೆ ಮುಂದಿಡುವುದಾಗಿ ಹೇಳಿದರು. ಫೆ.24 ರಂದು ಉಳ್ಳಾಲ ನದಿ ತೀರದಲ್ಲಿ ನೀರಿಗಿಳಿದು ಪ್ರತಿಭಟನೆ ನಡೆಸುವುದಾಗಿ ನುಡಿದರು. ಸಮಿತಿ ಸದಸ್ಯರಾದ ಕೈಲಾರು ರಾಜಗೋಪಾಲ ಭಟ್, ದಿನೇಶ್ ಹೊಳ್ಳ, ಪ್ರಶಾಂತ್ ಡಿಕೋಸ್ಟ, ಇರ್ಷಾದ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement