ಕರ್ತವ್ಯ ಪ್ರಜ್ಞೆ ಇದ್ದರೆ ಯಶಸ್ಸು ನಿಶ್ಚಿತ: ಕನ್ಯಾಡಿ ಶ್ರೀ
ಬೆಳ್ತಂಗಡಿ: ಕರ್ತವ್ಯಪ್ರಜ್ಞೆ ನಮ್ಮಲ್ಲಿದ್ದರೆ ಜೀವನ ಸುಧಾರಣೆಯ ಪ್ರಯತ್ನಗಳಿಗೆ ಯಶಸ್ಸು ನಿಶ್ಚಿತ ಎಂದು ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದದ್ದಾರೆ. ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭ ಧಾರ್ಮಿಕ ಸಭೆಯಲ್ಲಿ ಅವರುಆಶೀರ್ವಚನ ನೀಡಿದರು.
ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಈಜುಪಟು, ಗಿನ್ನಿಸ್ ದಾಖಲೆ ವೀರ ಗೋಪಾಲ ಖಾರ್ವಿಗೆ ಸಕಲ ಸಹಾಯ ಒದಗಿಸುವ ಭರವಸೆ ನೀಡಿದರು. ಈ ಸಂದರ್ಭ, ಗಿನ್ನಿಸ್ ದಾಖಲೆ ಸೃಷ್ಟಿಸಿದ ಕೋಡಿ ಕನ್ಯಾನದ ಗೋಪಾಲ ಖಾರ್ವಿ, ಕಂಬಳ ಓಟಗಾರ ರವಿಕುಮಾರ್, ಖೋಖೋ ಆಟಗಾರ ಸಂದೇಶ್ ಅವರನ್ನು ಸಮ್ಮಾನಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲು, ಇರುವೈಲು ಸತೀಶ್ಚಂದ್ರ ಸಾಲಿಯಾನ್, ಜಿ.ಪಂ. ಸದಸ್ಯೆ ತುಳಸಿ ಹಾರಬೆ, ತಾ.ಪಂ. ಸದಸ್ಯ ಸುಧೀರ್ ಸುವರ್ಣ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಭಾರತಿ, ಗೋಪಾಲ ಖಾರ್ವಿ ಇದ್ದರು.
ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಸ್ವಾಗತಿಸಿದರು. ನೊಚ್ಚ ನಿತ್ಯಾನಂದ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಶಿಕ್ಷಕ ಅಜಿತಕುಮಾರ್ ಕೊಕ್ರಾಡಿ ನಿರ್ವಹಿಸಿದರು.