ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಪಹಣಿಪತ್ರಕ್ಕಾಗಿ ಸುಡುಬಿಸಿಲಲ್ಲಿ ಸರತಿ ಸಾಲು!

Mainashree
Updated On : 22 Jan 2014, 2:24 am

ಉಪ್ಪಿನಂಗಡಿ: ಪಹಣಿ ಪತ್ರಕ್ಕಾಗಿ ಕಳೆದ ಕೆಲ ದಿನಗಳಿಂದ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ಮಹಿಳೆಯರು, ಅಬಾಲವೃದ್ಧರಾದಿಯಾಗಿ ಸುಡು ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಪ್ಪಿನಂಗಡಿಯಲ್ಲಿ ತಲೆದೋರಿದೆ.
ಇಲ್ಲಿನ ನಾಡಕಚೇರಿಯಲ್ಲಿರುವ ಅಟಲ್ ಸ್ನೇಹ ಕೇಂದ್ರಕ್ಕೆ ಪಹಣಿ ಪತ್ರಕ್ಕಾಗಿ ಆಗಮಿಸುವ ಮಂದಿ ಕಳೆದ ಕೆಲವು ದಿನಗಳಿಂದ ತಾಸುಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆಗೆ ಇದೆ. ಅದರಲ್ಲೂ ಸುಡು ಬಿಸಿಲಿನಲ್ಲಿ ನಿಲ್ಲಬೇಕಾದ ದುಃಸ್ಥಿತಿ. ಸಣ್ಣ ಮಕ್ಕಳೊಂದಿಗೆ ಬರುವ ಮಹಿಳೆಯರು, ವೃದ್ಧರು ಬಿಸಿಲಿಗೆ ಮೈಯೊಡ್ಡಲಾಗದೆ ಬಟ್ಟೆ, ಪೇಪರ್‌ಗಳನ್ನು ತಲೆಗೆ ಹಾಕಿ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಸಾಲಗಳ ನವೀಕರಣಕ್ಕೆ ಅತ್ಯಗತ್ಯವಾಗಿ ಪಹಣಿಪತ್ರ ಸಲ್ಲಿಕೆ ಮಾಡಬೇಕಾಗಿರುವುದರಿಂದ ಜನತೆ ಇದಕ್ಕಾಗಿ ಮುಗಿಬಿದ್ದಿದ್ದಾರೆ. ಈ ಸಂದರ್ಭ ಸಹಜವಾಗಿ ಒತ್ತಡ, ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಮೂಡಿದೆ. ಕೆಲ ದಿನಗಳ ಮಟ್ಟಿಗಾದರೂ ಜನತೆ ಬಿಸಿಲಿನಲ್ಲಿ ನಿಲ್ಲದಂತೆ ಕಂದಾಯ ಇಲಾಖೆ ಶಾಮಿಯಾನದ ವ್ಯವಸ್ಥೆ ಕಲ್ಪಿಸಿದರೆ ಬಿಸಿಲಿಗೆ ಮೈಯೊಡ್ಡುವ ದುಃಸ್ಥಿತಿಯಿಂದ ಜನತೆ ಪಾರಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement