ಬುದ್ಧೋದಯ ನಾಟಕ ಉದ್ಘಾಟನೆ
ಕೋಟ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಚಿಗುರು ಕಾರ್ಯಕ್ರಮದ ಅಂಗವಾಗಿ ಸಂಸ್ಕೃತಿ ಸಂಚಾರಿ ಕಲಾತಂಡ ಕೋಟ ಇದರ ಮಕ್ಕಳ ತಂಡದ ನಾಟಕ ಬುದ್ಧೋದಯದ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಗುಂಡ್ಮಿ ಯಕ್ಷಗಾನ ಕಲಾಕೇಂದ್ರ ಐರೋಡಿಯ ಸದಾನಂದ ರಂಗಮಂಟಪದಲ್ಲಿ ಜರುಗಿತು. ನಿವೃತ್ತ ಶಿಕ್ಷಕಿ ಸುಶೀಲಾ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಾಲಿಗ್ರಾಮ ಪಪಂ ಅಧ್ಯಕ್ಷ ಪಿ. ಸಾಧು ವಹಿಸಿದ್ದರು. ಉಡುಪಿ ಟೌನ್ ಕೋಆಪರೇಟಿವ್ ಬ್ಯಾಂಕ್ನ ಪ್ರಬಂಧಕ ಲಕ್ಷ್ಮೀನಾರಾಯಣ, ವೈಕುಂಠ ಹೆಬ್ಬಾರ್ ಉಪಸ್ಥಿತರಿದ್ದರು. ಮಂಜುನಾಥ ಕೋಟ ಸ್ವಾಗತಿಸಿದರು. ರಾಮಚಂದ್ರ ಐತಾಳ್ ನಿರೂಪಿಸಿದರು. ಸಂಚಾಲಕಿ ಸುಧಾ ಮಣೂರು ವಂದಿಸಿದರು.