ಇಂದು 33 ಶಾಲೆಗಳಿಗೆ 100 ಕಂಪ್ಯೂಟರ್ ಕೊಡುಗೆ
ಬೆಳ್ತಂಗಡಿ: ಕನ್ಯಾಡಿ ಸೇವಾಭಾರತಿಯ ದಶವರ್ಷ ಪ್ರಯುಕ್ತ 26ರಂದು ಬೆಳ್ತಂಗಡಿ ತಾಲೂಕಿನ 33 ಗ್ರಾಮೀಣ ಶಾಲೆಗಳಿಗೆ 100 ಕಂಪ್ಯೂಟರ್ಗಳನ್ನು ಕೊಡುಗೆ ರೂಪದಲ್ಲಿ ನೀಡಲಾಗುವುದು ಮತ್ತು 5 ಸುಸಜ್ಜಿತ ಶೌಚಾಲಯ ಸಂಕೀರ್ಣಗಳ ಉದ್ಘಾಟನೆ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎಂ.ಹರೀಶ್ ರಾವ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ದಶವರ್ಷದ ಪ್ರಯುಕ್ತ 26ರಂದು ಬೆಳಗ್ಗೆ 8 ಗಂಟೆಗೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ಶಾಲೆ ವಠಾರದಲ್ಲಿ ಸನಾತನ ನಾಟ್ಯಾಲಯ ವತಿಯಿಂದ ರಾಷ್ಟ್ರ ದೇವೋ ಭವ ಎಂಬ ಪ್ರಸ್ತುತಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಗೆ ಕನ್ಯಾಡಿ ಶಾಲೆ ವಠಾರದಲ್ಲಿ ಶತ ಕಂಪ್ಯೂಟರ್ ಕೊಡುಗೆ ಕಾರ್ಯಕ್ರಮ, ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಕೆ. ವಸಂತ ಬಂಗೇರ ಉದ್ಘಾಟಿಸಲಿದ್ದಾರೆ. ಸೇವಾಭಾರತಿ ಕಾರ್ಯದರ್ಶಿ ಬಿ.ಕೃಷ್ಣಪ್ಪ ಗುಡಿಗಾರ್, ಉಪಾಧ್ಯಕ್ಷ ಪ್ರಭಾಕರ ಉಪಾಧ್ಯ, ಖಜಾಂಚಿ ಸತೀಶ್ ರಾವ್, ಧರಿತ್ರಿ ಕೃಷಿಕರ ಸಂಘದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಕಲ್ಮಂಜ ಇದ್ದರು.