ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ರಂಗನಾಥ ಶರ್ಮ ನಿಧನಕ್ಕೆ ರಾಘವೇಶ್ವರಶ್ರೀ ಸಂತಾಪ

Mainashree
Updated On : 26 Jan 2014, 10:59 am

ಮಂಗಳೂರು: ಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥ ಶರ್ಮರ ನಿಧನ ವಿದ್ವತ್ ಲೋಕಕ್ಕೆ ಆಘಾತವುಂಟು ಮಾಡಿದೆ. ಅವರು ಅಪ್ರತಿಮೆ ವಿದ್ವಾಂಸರಾಗಿದ್ದರು. ಸನಾತನ ಭಾರತೀಯ ಶಾಸ್ತ್ರಗಳ ಅಮೂಲಾಗ್ರ ಅಧ್ಯಯನ ಮಾಡಿ ಪರಂಪರೆಯ ಕೊಂಡಿಯಾಗಿದ್ದರು ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ  ಭಾರತೀ ಸ್ವಾಮೀಜಿ ಹೇಳಿದ್ದಾರೆ.  ಅನೇಕ ಗ್ರಂಥಗಳನ್ನು ರಚಿಸಿ ಸಂಸ್ಕೃತಿಗೆ ಹೊಸ ಬೆಳಕು ನೀಡಿದ್ದರು. ಸಹಸ್ರಾರು ವಿದ್ಯಾರ್ಥಿಗಳನ್ನು ಸಿದ್ಧಪಡಿಸಿ ಆಚಾರ್ಯ ಪರಂಪರೆಯನ್ನು ಬೆಳೆಸಿದ್ದರು. ಸಂಸ್ಕೃತದಲ್ಲಷ್ಟೇ ಅಲ್ಲದೆ ಕನ್ನಡದಲ್ಲೂ ವಿಶಿಷ್ಠ್ಯ ಪಾಂಡಿತ್ಯವನ್ನು ಸಂಪಾದಿಸಿದ ಎರಡು ಭಾಷೆಗಳ ಸಂವಹನ ಸೇತುವಾಗಿದ್ದರು. ಶಾಸ್ತ್ರ, ಕಾವ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅವರ ಕಾರ್ಯ ಅನರ್ಘ್ಯವಾದದ್ದು. ಇಂಥ ಅನಘ್ಯ ರತ್ನವನ್ನು ಕಳೆದುಕೊಂಡಿದ್ದೇವೆ ಎಂದು ಶ್ರೀಗಳು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement