ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಗಣರಾಜ್ಯೋತ್ಸವ ಆಚರಣೆ ದಿನವೂ ಸಂಸತ್ ಕಲಾಪ!

Vishwanath S
Updated On : 28 Jan 2014, 11:29 am

ಬಂಟ್ವಾಳ: ಗಣರಾಜ್ಯೋತ್ಸವ ಎಂದರೆ ಕೇವಲ ಧ್ವಜಾರೋಹಣ, ಸಿಹಿತಿಂಡಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದು ರೂಢಿ. ಆದರೆ ಕಲ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಅಣಕು ಸಂಸತ್ ನಡೆಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಧ್ವಜಾರೋಹಣದ ಬಳಿಕ ವಿಧಾನಸಭೆಗೆ ಆಗಮಿಸಿದ ಸಭಾಧ್ಯಕ್ಷರು, ಮುಖ್ಯಮಂತ್ರಿ, ವಿಪಕ್ಷದವರ ಉಪಸ್ಥಿತಿಯಲ್ಲಿ ಚರ್ಚೆ ನಡೆಸಿದ್ದು ಗಣರಾಜ್ಯ ದಿನಕ್ಕೆ ವಿಶೇಷ ಅರ್ಥ ನೀಡಿತು.
ಸಭಾಧ್ಯಕ್ಷರಾದ ದೀಕ್ಷಾ, ಮುಖ್ಯಮಂತ್ರಿ ಕಾರ್ತಿಕ್, ವಿಪಕ್ಷ ನಾಯಕ ರಹಿಮಾನ್, ಶಿಕ್ಷಣ ಸಚಿವೆ ಅಂಬಿಕಾ, ಗೃಹ ಸಚಿವೆ ಅಂಕಿತಾ, ನೀರಾವರಿ ಸಚಿವೆ ಸುಮಯ್ಯ, ಅರಣ್ಯ ಸಚಿವೆ ತಶ್ಮಿಯಾ ಅಧಿವೇಶನದಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು.
ಸಭಾಧ್ಯಕ್ಷರು ಕೋರಂ ಘೋಷಿಸಿದ ಬಳಿಕ, ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಹಾಗೂ  ಪಿಎಸ್‌ಐ ಮಂಜುನಾಥ ಬಂಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಾರತರತ್ನ ಪ್ರಶಸ್ತಿ ಪುರಸ್ಕೃತ ಕನ್ನಡಿಗ ಸಿ.ಎನ್.ರಾವ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಬಳಿಕ ಪ್ರಶ್ನೋತ್ತರ ಕಲಾಪ ಆರಂಭಗೊಂಡಿತು. ಬೇಸಿಗೆಯ ಆಗಮನದೊಂದಿಗೆ ತಲೆದೋರುವ ನೀರಿನ ಸಮಸ್ಯೆ, ವಾರ್ಷಿಕ ಪರೀಕ್ಷೆ ವೇಳೆ ಕರೆಂಟ್ ಕಣ್ಣಾಮುಚ್ಚಾಲೆ,, ಒಂದನೇ ತರಗತಿಯ ವಿದ್ಯಾರ್ಥಿಗಳ ಹಾಜರಾತಿ, ವಿದ್ಯಾರ್ಥಿ ವೇತನ ಗಂಡು ಮಕ್ಕಳಿಗೂ ವಿಸ್ತರಣೆ, ಶಾಲೆ ಬಿಸಿಯೂಟದಲ್ಲಿ ನೀಡುವ ಆಹಾರದಲ್ಲಿ ವೆವಿಧ್ಯತೆ ತರುವುದು. ಬೆಲೆ ಏರಿಕೆ ಬಗ್ಗೆ, ಪಠ್ಯಪುಸ್ತಕ ಪೂರೈಕೆ, ನೇತ್ರಾವತಿ ತಿರುವು ಕುರಿತು ಬಿರುಸಿನ ಚರ್ಚೆ ನಡೆಯಿತು.
ಗದ್ದಲ ಎಬ್ಬಿಸಿದ ಎಟಿಎಂ ದರೋಡೆ!
ಶೂನ್ಯ ವೇಳೆಯಲ್ಲಿ ಚರ್ಚೆ ನಡೆಸಿದ ವಿದ್ಯಾರ್ಥಿ ನಾಯಕರು, ಎಟಿಎಂ ದರೋಡೆಕೋರನನ್ನು ಈವರೆಗೆ ಪತ್ತೆ ಹಚ್ಚದಿರುವ ಬಗ್ಗೆ ಗದ್ದಲ ಎಬ್ಬಿಸಿದರು. ಕಲ್ಲಡ್ಕ ಶಾಲಾ ಬಳಿ ಹೆದ್ದಾರಿಯಲ್ಲಿ ಶಾಲಾ ಪ್ರದೇಶ ಎಂಬ ಫಲಕದ ಬೇಡಿಕೆ ಈವರೆಗೂ ಅನುಷ್ಠಾನಗೊಳ್ಳದಿರುವ ಬಗೆಗಿ ಚರ್ಚೆ ಕಾವೇರಿ ಬಳಿಕ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.  ಬೆಳಗ್ಗೆ ಗಣರಾಜ್ಯೋತ್ಸವದಲ್ಲಿ ಸ್ಥಳೀಯ ಗ್ರಾಪಂ ಸದಸ್ಯ ಝಕಾರಿಯ ಧ್ವಜಾರೋಹಣಗೈದರು. ಅಣಕು ಸಂಸತ್ತಿಗೆ ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ಕೆ, ಸದಸ್ಯರಾದ ಜಯರಾಮ ಕೊಟ್ಟಾರಿ, ಚಂದ್ರಶೇಖರ ಕೊಟ್ಟಾರಿ, ಸಮೂಹ ಸಂಪನ್ಮೂಲ ವ್ಯಕ್ತಿ ಉದಯಕುಮಾರ್, ಮುಖ್ಯ ಶಿಕ್ಷಕ ಅಶ್ರಫ್, ಶಿಕ್ಷಕರು ವೀಕ್ಷಕರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement