ನೈತಿಕ ಪೊಲೀಸ್ಗಿರಿ: ಇಬ್ಬರ ಬಂಧನ
ಮಂಗಳೂರು: ಮುಸ್ಲಿಂ ಮಹಿಳೆಯೊಂದಿಗೆ ಮಾತನಾಡುತ್ತಿದ್ದ ಮೋಗವೀರ ಪಟ್ಣ ನಿವಾಸಿ ಹಿತರಾಜ್ನನ್ನು ಅಪಹರಿಸಿ ಹಲ್ಲೆಗೈದ ಇಬ್ಬರು ನೈತಿಕ ಪೊಲೀಸರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಮುಳ್ಳಗಡ್ಡೆ ಹನೀಫ್ (22) ಮತ್ತು ಯಾತೆ ಹನೀಫ್ (33) ಬಂಧಿತರು. ಮೊಬೈಲ್ ಮೂಲಕ ಮಿಸ್ಡ್ ಕಾಲ್ನಿಂದ ಪರಿಚಿತರಾದ ಮುಸ್ಲಿಂ ಮಹಿಳೆಯನ್ನು ಕೆ.ಸಿ.ರೋಡ್ಗೆ ಬರುವಂತೆ ಹಿತರಾಜ್ ತಿಳಿಸಿದ್ದರು. ಅದರಂತೆ ಅಲ್ಲಿ ಹೋಗಿ ಮಾತನಾಡುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಹಿತರಾಜ್ನನ್ನು ಅಪಹರಿಸಿ ಫಲಾಹ್ ಶಾಲೆ ಮುಂಭಾಗದ ಹಾಡಿಯಲ್ಲಿ ಹಲ್ಲೆ ನಡೆಸಿದ್ದರು. ಆರೋಪಿಗಳಿಗೆ ಫೆ.2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.