ಮೂಲ್ಕಿ ಪ.ಪಂ.; ಶೇ.73 ಮತದಾನ
ಮೂಲ್ಕಿ: ಮೂಲ್ಕಿ ಪಟ್ಟಣ ಪಂಚಾಯಿತಿಯ ಎಲ್ಲಾ 17 ವಾರ್ಡ್ಗಳಿಗೆ ಸೋಮವಾರ ಶಾಂತಿಯುತವಾಗಿ ಮತದಾನ ನಡೆಯಿತು. ಒಟ್ಟು ಶೇ.73.03 ಮತದಾನವಾಗಿದೆ.
ಒಟ್ಟು 12070 ಮತದಾರರಲ್ಲಿ 8815 ಮಂದಿ ಮತದಾನ ಮಾಡಿದ್ದಾರೆ.
ವಾರ್ಡ್ 14ರಲ್ಲಿ ಅತಿ ಹೆಚ್ಚು ಶೇ.81.22, ವಾರ್ಡ್ 5ರಲ್ಲಿ ಅತಿ ಕಡಿಮೆ ಶೇಕಡಾ 66.85 ಮತದಾನವಾಗಿದ್ದು, 29ರಂದು ಬೆಳಿಗ್ಗೆ 8ರಿಂದ ಮತಗಳ ಎಣಿಕೆ ಮೂಲ್ಕಿ ನಗರ ಪಂಚಾಯಿತಿ ಕಚೇರಿಯಲ್ಲಿ ಜರುಗಲಿದೆ.
ಪಣಂಬೂರು ಎಸಿಪಿ ರವಿ ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಪಣಂಬೂರು ವ್ಯಾಪ್ತಿಯ ಆರು ಪೊಲೀಸ್ ಠಾಣೆಗಳಿಂದ ಸಿಬ್ಬಂದಿಯನ್ನು ಮತದಾನ ಕಾರ್ಯಕ್ಕೆ ನೇಮಿಸಲಾಗಿತ್ತು.
ಮೂಲ್ಕಿಯ ಅತಿ ಸೂಕ್ಷ್ಮ ಪ್ರದೇಶವಾಗಿರುವ ಕೆ.ಎಸ್.ರಾವ್ ನಗರದಲ್ಲಿ ಎರಡು ಸಿಆರ್ಪಿ ತುಕಡಿ ನೇಮಿಸಲಾಗಿದ್ದು, ಮತದಾನ ಶಾಂತವಾಗಿ ನಡೆಯಿತು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 11 ಕೇಂದ್ರಗಳಲ್ಲಿ 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಒಟ್ಟು 12130 ಮತದಾರರಿದ್ದಾರೆ. 17 ವಾರ್ಡ್ಗಳಿಂದ ಕಾಂಗ್ರೆಸ್, ಬಿಜೆಪಿಯಿಂದ ತಲಾ 17, ಜೆಡಿಎಸ್ನಿಂದ 9 ಹಾಗೂ ಎಸ್ಡಿಪಿಐ ಮತ್ತು ಪಕ್ಷೇತರರು ತಲಾ ನಾಲ್ಕು ಮಂದಿ ಸೇರಿದಂತೆ ಒಟ್ಟು 51 ಮಂದಿ ಕಣದಲ್ಲಿದ್ದಾರೆ. 6 ವಾರ್ಡ್ಗಳಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆಯಿದ್ದು, 4 ವಾರ್ಡ್ಗಳಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ, ನಾಲ್ಕು ವಾರ್ಡ್ಗಳಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಮತ್ತು ಎಸ್ಡಿಪಿಐ ನಡುವೆ, 2 ವಾರ್ಡ್ಗಳಲ್ಲಿ ಕಾಂಗ್ರೆಸ್-ಬಿಜೆಪಿ-ಪಕ್ಷೇತರರ ನಡುವೆ ತ್ರಿಕೋನ ಸ್ಪರ್ಧೆ ಹಾಗೂ ಒಂದು ವಾರ್ಡ್ನಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಹಾಗೂ ಇಬ್ಬರು ಪಕ್ಷೇತರರ ನಡುವೆ ಸ್ಪರ್ಧೆ ನಡೆಯಲಿದೆ. 29ರಂದು ಬೆಳಗ್ಗೆ 8ರಿಂದ ಮೂಲ್ಕಿ ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡದಲ್ಲಿ ಮತ ಎಣಿಕೆ ನಡೆಯಲಿದೆ.