ಇಂದಿನಿಂದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ
ಮಂಗಳೂರು: ಸ್ವಾಯತ್ತ ಸೇಂಟ್ ಅಲೋಶಿಯಸ್ ಕಾಲೇಜ್ನಲ್ಲಿ ಅಲೋಶಿಯಸ್ ಫೆಸ್ಟ್ 2014 ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವ ಜ.30ರಿಂದ ಫೆ.1ರವರೆಗೆ ನಡೆಯಲಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನ ವ್ಯವಸ್ಥಾಪಕ ರಾಜ್ಕಿರಣ್ ರೈ ಉದ್ಘಾಟಿಸುತ್ತಾರೆ. ರೆಕ್ಟರ್ ಫಾ.ಡೆನ್ಜಿಲ್ ಲೋಬೊ ಅಧ್ಯಕ್ಷತೆ ವಹಿಸುವರು. ಫೆ.1ರಂದು ಉತ್ಸವ ಸಮಾರೋಪ ನಡೆಯಲಿದೆ. ಕಾರ್ಪೊರೇಶನ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಗಿರಿಧರ್ ಶೆಣೈ ಭಾಗವಹಿಸುವರು ಎಂದು ಕಾಲೇಜ್ ಪ್ರಾಂಶುಪಾಲ ಫಾ.ಸ್ವೀಬರ್ಟ್ ಡಿಸಿಲ್ವ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗ್ರಾಮ್ಯ ಕಲಾ ವಿಷಯದಲ್ಲಿ ಕುಂಭಕಲೆ, ದರ್ಪಣ, ಛಾಯಾಗ್ರಹಣ, ವಾದ ವಿವಾದ, ಸಂಕಲ್ಪ, ಮನೋ ವಿಶ್ಲೇಷಣೆ ಮುಂತಾದ 15 ವಿಭಾಗಗಳಲ್ಲಿ ವೈವಿಧ್ಯಮಯ ಸ್ಪರ್ಧೆ ನಡೆಯಲಿದೆ ಎಂದರು. ಕಾಲೇಜ್ ನಿರ್ದೇಶಕ ಪ್ರೊ.ಜಾನ್ ಶೆರ, ವಿದ್ಯಾರ್ಥಿ ನಾಯಕ ಪೊನ್ನಣ್ಣ, ಕಾರ್ಯದರ್ಶಿ ರಶ್ಮಿ ಪೆರಿಸ್ ಇದ್ದರು.