ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬೋಳಂತಕೋಡಿ ಪ್ರಶಸ್ತಿ ಪ್ರದಾನ

Lingaraj Badiger
Updated On : 30 Jan 2014, 12:57 pm

ಪುತ್ತೂರು: ಉತ್ತಮ ಬದುಕಿಗೆ ಸಾಹಿತ್ಯದ ಓದು ಮತ್ತು ಪ್ರೀತಿ ಅನಿವಾರ್ಯವಾಗಿದ್ದು, ಸಾಹಿತ್ಯದ ಸಾಧಕರನ್ನು ಸ್ಮರಿಸುವುದು ಮತ್ತು ಸಾಧನೆಯನ್ನು ಮೆಲುಕು ಹಾಕುವುದು ಸಾಹಿತ್ಯದ ಭಾಗವಾಗಿದೆ ಎಂದು ಹಿರಿಯ ಸಾಹಿತಿ ಎ.ಪಿ. ಮಾಲತಿ ಅಭಿಪ್ರಾಯಪಟ್ಟರು.
 ಅವರು ಬುಧವಾರ ಪುತ್ತೂರಿನ ಟೌನ್‌ಬ್ಯಾಂಕ್ ಸಭಾಭವನದಲ್ಲಿ ಬೋಳಂತಕೋಡಿ ಪ್ರತಿಷ್ಠಾನದ ವತಿಯಿಂದ ನಡೆದ 'ಬೋಳಂತಕೋಡಿ ಕನ್ನಡ ಪ್ರಶಸ್ತಿ' ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಪುತ್ತೂರಿನ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಟ್ರಸ್ಟಿ ಶ್ರೀದೇವಿ ಕಾನಾವು ಸಮಾರಂಭ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿದ್ವಾಂಸ ಸಿದ್ಧಮೂಲೆ ಶಂಕರನಾರಾಯಣ ಭಟ್ ಮತ್ತು ಕವಿ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರಿಗೆ 'ಬೋಳಂತಕೋಡಿ ಕನ್ನಡ ಪ್ರಶಸ್ತಿ' ಪ್ರದಾನ ಮಾಡಲಾಯಿತು.
ವಿಶ್ರಾಂತ ಉಪನ್ಯಾಸಕ ಪ್ರೊ.ವಿ.ಬಿ. ಅರ್ತಿಕಜೆ ಮತ್ತು ರಂಗಕರ್ಮಿ ಮೂರ್ತಿ ದೇರಾಜೆ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಬಳಿಕ ಪತ್ರಕರ್ತ ನಾ. ಕಾರಂತ ಪೆರಾಜೆ ಅವರ 'ಅವಿಲು ಬೆಂಡರವಾಡಿ', ಸುಬ್ರಹ್ಮಣ್ಯ ಶರ್ಮ ಅವರ 'ಬುತ್ತಿ', ಎಂ. ಸತ್ಯಮೂರ್ತಿ ಹೆಬ್ಬಾರ್ ಅವರ 'ವಿದ್ಯಾರ್ಥಿಗಳಿಗಾಗಿ ಏನು-ಏಕೆ-ಹೇಗೆ?' ಮತ್ತು ಸಂತೋಷ್ ಅವರ 'ಮುದ್ರಾಜ್ಞಾನ' ಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.
 ಪುತ್ತೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ದಿ. ಬೋಳಂತಕೋಡಿ ಈಶ್ವರ ಭಟ್ಟರಿಗೆ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ. ಶ್ರೀಧರ್ ನುಡಿನಮನ ಸಲ್ಲಿಸಿದರು. ಪುತ್ತೂರಿನ ರಾಜೇಶ್ ಪವರ್ ಪ್ರೆಸ್‌ನ ಮಾಲೀಕ ಎಂ.ಎಸ್. ರಘುನಾಥ ರಾವ್ ಶುಭಾಶಂಸನೆ ಮಾಡಿದರು.
 ನ್ಯಾಯವಾದಿ ಕೆ.ಆರ್. ಆಚಾರ್ಯ ಸ್ವಾಗತಿಸಿದರು. ಪ್ರಕಾಶ್ ಕುಮಾರ್ ಕೊಡೆಂಕಿರಿ ವಂದಿಸಿದರು. ಉಪನ್ಯಾಸಕ ಡಾ. ರಾಜೇಶ್ ಬೆಜ್ಜಂಗಳ ನಿರೂಪಿಸಿದರು. ಸಮಾರಂಭದ ಬಳಿಕ ಪದ್ಮಾ ಕೆ.ಆರ್. ಆಚಾರ್ಯ ಇವರ ನಿರ್ದೇಶನದಲ್ಲಿ ಪುತ್ತೂರಿನ ಧೀ-ಶಕ್ತಿ ಮಹಿಳಾ ಯಕ್ಷ ಬಳಗ ಇವರಿಂದ ಮೋಕ್ಷ ಸಂಗ್ರಾಮ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರುಗಿತು. ಕಲಾವಿದರಾಗಿ ಕಾವ್ಯಶ್ರೀ ಆಜೇರು, ಶ್ರೀಪತಿ ನಾಯಕ್ ಆಜೇರು, ಪಿ.ಜಿ. ಜಗನ್ನಿವಾಸ ರಾವ್(ಹಿಮ್ಮೇಳ), ವೀಣಾ ನಾಗೇಶ ತಂತ್ರಿ, ಪದ್ಮಾ ಕೆ.ಆರ್. ಆಚಾರ್ಯ, ಡಾ. ಶೋಭಿತಾ ಸತೀಶ್, ಗೀತಾ ರಾಮಚಂದ್ರ ಕೆದಿಲ, ವೀಣಾ ಸರಸ್ವತಿ ನಿಡ್ವಣ್ಣಾಯ (ಅರ್ಥದಾರಿ) ಭಾಗವಹಿಸಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement