4ರಿಂದ ಚೆರುತ್ತೂರಿನಲ್ಲಿ ರೈಲು ನಿಲುಗಡೆ
ಮಂಗಳೂರು: ಕೇರಳ ನೆಲ್ಲಿಕತುರ್ಥಿ ಭಗವತಿ ದೇವಸ್ಥಾನದ ಜಾತ್ರೆ ಸಲುವಾಗಿ ಭಕ್ತಾದಿಗಳ ಅನುಕೂಲಕ್ಕೆ ಚೆರುವತ್ತೂರಿನಲ್ಲಿ ಫೆ.4ರಿಂದ 11ರ ವರೆಗೆ ಕೆಲವು ರೈಲುಗಳಿಗೆ ಒಂದು ನಿಮಿಷ ನಿಲುಗಡೆ ಕಲ್ಪಿಸಲಾಗಿದೆ. ಮಂಗಳೂರು ಸೆಂಟ್ರಲ್-ಕೊಯಂಬತ್ತೂರ್ ಜಂಕ್ಷನ್ ಇಂಟರ್ಸಿಟಿ ಎಕ್ಸ್ಪ್ರೆಸ್(ಮಧ್ಯಾಹ್ನ 12.52), ಕೊಯಂಬತ್ತೂರ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಇಂಟರ್ಸಿಟಿ ಎಕ್ಸ್ಪ್ರೆಸ್(ಬೆಳಗ್ಗೆ 11.54), ಮಂಗಳೂರು ಸೆಂಟ್ರಲ್-ನಾಗರಕೊಯಿಲ್ ಸಿಟಿ ಎಕ್ಸ್ಪ್ರೆಸ್(ಬೆಳಗ್ಗೆ 6.15), ನಾಗರಕೊಯಿಲ್ ಜಂಕ್ಷನ್-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್(ಸಂಜೆ 6.30)ರೈಲುಗಳಿಗೆ ನಿಲುಗಡೆ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.