ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅಂತರ್‌ಕಾಲೇಜು ಭಾರ ಎತ್ತುವ, ದೇಹದಾರ್ಢ್ಯ ಸ್ಪರ್ಧೆ ಉದ್ಘಾಟನೆ

Lingaraj Badiger
Updated On : 31 Jan 2014, 12:47 pm

ಬೆಳ್ತಂಗಡಿ: ನಮ್ಮ ಜೀವನದಲ್ಲಿ ವಿದ್ಯೆ ಮತ್ತು ಕ್ರೀಡೆಗಳಿಗೆ ಸಮಾನ ಸ್ಥಾನವಿದೆ. ನಾವು ಕ್ರೀಡೆ ಮತ್ತು ವ್ಯಾಯಾಮಗಳಿಗೆ ಪ್ರಾಶಸ್ತ್ಯ ಕೊಟ್ಟಷ್ಟು ನಮ್ಮ ಆರೋಗ್ಯ ವೃದ್ಧಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ಸತತ ಪರಿಶ್ರಮದ ಅಗತ್ಯವಿದೆ ಎಂದು ಕಾಮನ್‌ವೆಲ್ತ್ ಭಾರ ಎತ್ತುವ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ಪುಷ್ಪರಾಜ್ ಹೆಗ್ಡೆ ಹೇಳಿದ್ದಾರೆ.
ಗುರುವಾರ ಇಲ್ಲಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಪ್ರೊ. ರಿಚಡರ್ ರೆಬೆಲ್ಲೊ ರೋಲಿಂಗ್ ಟ್ರೋಫಿ (ಪುರುಷರಿಗಾಗಿ) ಮತ್ತು ಶಿರ್ವ ಬ್ಲೋಸಂ ಮೆನ್ಸಿಯನ್ ಸೆಲೆಸ್ಟಿನ್ ಡಿಸೋಜ ಟ್ರೋಫಿ (ಮಹಿಳೆಯರಿಗಾಗಿ) ಭಾರ ಎತ್ತುವ ಸ್ಪರ್ಧೆ ಮತ್ತು ಉತ್ತಮ ದೇಹದಾರ್ಢ್ಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಗೌರವ ಅತಿಥಿಗಳಾಗಿ ರಾಜ್ಯ ಅಮೆಚೂರ್ ಅಥ್ಲೆಟಿಕ್ ಎಸೋಸಿಯೇಶನ್ ಗೌರವ ಕಾರ್ಯದರ್ಶಿ ಎನ್. ಚಂದ್ರಶೇಖರ್ ರೈ, ರಾಷ್ಟ್ರೀಯ ಭಾರ ಎತ್ತುವ ಸ್ಪರ್ಧೆಯ ಮಾಜಿ ಚಾಂಪಿಯನ್ ಎ. ರಮೇಶ್, ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಡಾ. ಆಂಟನಿ ಪ್ರಕಾಶ್ ಮೊಂತೆರೊ, ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿಜಯ್ ಲೋಬೋ ಮತ್ತು ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎ. ನಾಗಲಿಂಗಪ್ಪ ಭಾಗವಹಿಸಿದ್ದರು.
ಇದೇ ವೇಳೆ ಫಿಲೋಮಿನಾ ಕಾಲೇಜಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಮಾಜಿ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಸನ್ಮಾನಿಸಲಾಯಿತು.  ಕಾಲೇಜಿನ ಸಂಚಾಲಕ ಜೆರಾಲ್ಡ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ವಂದನಾ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಕ್ರೀಡಾಕೂಟದ ಸಂಯೋಜಕ ಪ್ರಕಾಶ್ ಡಿಸೋಜಾ ಸನ್ಮಾನಿತರ ವಿವರ ನೀಡಿದರು. ವಿದ್ಯಾರ್ಥಿ ಗಣಪತಿ ವಂದಿಸಿದರು. ಪ್ರೊ. ಭಾರತಿ ರೈ ನಿರೂಪಿಸಿದರು.
--
ಬೀಚ್ ಉತ್ಸವ: ಪ್ರವೇಶ ಪ್ರಕ್ರಿಯೆ
ಮಂಗಳೂರು: ಕರಾವಳಿ ಉತ್ಸವದ ಸಲುವಾಗಿ ಫೆ. 21 ರಿಂದ 23ರವರೆಗೆ ಪಣಂಬೂರು ಬೀಚ್ ಉತ್ಸವ ನಡೆಯಲಿದೆ. ಈ ಸಂದರ್ಭ ನೃತ್ಯ ಮತ್ತು ಹಾಡುಗಾರಿಕೆ ನಡೆಯಲಿದೆ. ಫೆ. 12 ರಂದು ಬೆಳಗ್ಗೆ 9 ಗಂಟೆಯಿಂದ ಪುರಭವನದಲ್ಲಿ ನೃತ್ಯ ಪ್ರದರ್ಶನದ ಹಾಗೂ ರವೀಂದ್ರ ಕಲಾ ಭವನದಲ್ಲಿ ಹಾಡುಗಾರಿಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನೃತ್ಯದಲ್ಲಿ ಚಲನಚಿತ್ರ ಹಾಡುಗಳಿಗೆ ಅವಕಾಶ. ರಿಮಿಕ್ಸ್ ಹಾಡುಗಳಿಗೆ ನೃತ್ಯ ಮಾಡುವಂತಿಲ್ಲ. ತಂಡದಲ್ಲಿ ಕನಿಷ್ಠ 8 ಮಂದಿ ಇರಬೇಕು. ಬೆಂಕಿ ಮತ್ತು ಅವಘಡ ತರುವಂಥ ವಸ್ತುಗಳನ್ನು ನಿಷೇಧಿಸಲಾಗಿದೆ. ಫೆ. 11 ಕೊನೆ ದಿನ. ಠಛಟಿಛಟಛ್ಡ್ಠ್ಡಿಛಿಜಝ್ಛಜಿಜಡಡ್ಝಿಢಛಟಅ್ಜಟಛ್ಝಟ.್ಛ್ಟಟ ವೆಬ್‌ಸೈಟಿನಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಯತೀಶ್ ಬೈಕಂಪಾಡಿ-9449035570 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

10 ದಿನ ಕೃಷಿ ಅಧ್ಯಯನ ಪ್ರವಾಸ
ಮಂಗಳೂರು: 2013-14ರ ಸಾಲಿಗೆ ಕೃಷಿ ಪ್ರಶಸ್ತಿಗೆ ವಿಜೇತರಾದ ರೈತರನ್ನು ದೇಶದ ಇತರ ರಾಜ್ಯಗಳಿಗೆ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲು ಕೃಷಿ ಇಲಾಖೆ ನಿರ್ಧರಿಸಿದ್ದು, 10 ದಿನದ ಪ್ರವಾಸದ ವ್ಯವಸ್ಥೆ ಕಲ್ಪಿಸುವ ಖಾಸಗಿ ಕೃಷಿ ಪ್ರವಾಸೋದ್ಯಮ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಕೃಷಿ ಅಧ್ಯಯನಕ್ಕಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ 25 ರೈತರನ್ನು ಹಾಗೂ 3 ಇಲಾಖೆ ಅಧಿಕಾರಿಗಳನ್ನು ಕರೆದೊಯ್ಯಲಾಗುತ್ತದೆ. ಇತರ ರಾಜ್ಯಗಳಲ್ಲಿ ಅಳವಡಿಸಿರುವ ಉತ್ತಮ ಕೃಷಿ ಪದ್ಧತಿಗಳನ್ನು ಅನುಸರಿಸುತ್ತಿರುವ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಆಸಕ್ತ ಖಾಸಗಿ ಸಂಸ್ಥೆಗಳು ಫೆ. 5ರೊಳಗೆ ಮಂಗಳೂರು ಜಂಟಿ ನಿರ್ದೇಶಕ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 0824-2423604 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement