ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಇಂದಿನಿಂದ ಅಲ್ಫೋನ್ಸಾ ಚರ್ಚ್ ಬೆಳ್ಳಿಹಬ್ಬ

Lingaraj Badiger
Updated On : 31 Jan 2014, 12:50 pm

ಮಂಗಳೂರು: ಕಂಕನಾಡಿ ಸಂತ ಅಲ್ಫೋನ್ಸಾ ಕೆಥೊಲಿಕ್ ಚರ್ಚ್‌ನ ರಜತ ಮಹೋತ್ಸವ ಪ್ರಯುಕ್ತ ಜ. 31 ರಿಂದ ಫೆ. 2ರವರೆಗೆ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.
31 ರಂದು ಸಂಜೆ 5.15ಕ್ಕೆ ಬೆಳ್ತಂಗಡಿ ಫಾ. ಜೋಸ್ ವಾಲಿಯಪರಂಬಲಿ ಧ್ವಜಾರೋಹಣ ಮಾಡುವರು. ಫೆ. 2 ರಂದು ಸಂಜೆ 5ಕ್ಕೆ ನಡೆಯುವ ಸಮಾರೋಪವನ್ನು ಮಂಗಳೂರು ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜ ಉದ್ಘಾಟಿಸುವರು. ಆರೋಗ್ಯ ಸಚಿವ ಯು.ಟಿ. ಖಾದರ್, ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೊ ಪಾಲ್ಗೊಳ್ಳುವರು ಎಂದು ಚರ್ಚ್‌ನ ಧರ್ಮಗುರು ಫಾ. ಸೆಬಾಸ್ಟಿಯನ್ ಚೇಲಕ್ಕಪಳ್ಳಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರದಲ್ಲಿ ವಾಸಿಸುತ್ತಿರುವ ಸೀರೋ ಮಲಬಾರ್ ಕ್ರೈಸ್ತ ಸಮುದಾಯಕ್ಕೆ ಸೇರಿದ ಸುಮಾರು 12 ಸಾವಿರ ಮಂದಿ ತಮ್ಮ ದೈನಂದಿನ ಧಾರ್ಮಿಕ ಪ್ರಾರ್ಥನೆ ನೆರವೇರಿಸಲು ಇರುವ ಏಕೈಕ ಚರ್ಚ್ ಇದಾಗಿದೆ. ಚರ್ಚ್ ವತಿಯಿಂದ ರಕ್ತದಾನ, ಬಡ ರೋಗಿಗಳಿಗೆ ಸಹಾಯಧನ ಪೂರೈಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಡೇವಿಸ್, ಪಿ.ಪಿ. ಜೋಸೆಪ್, ಸಜೇಶ್ ಕೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement