ಟಿಪ್ಪರ್-ಬೈಕ್ ಮುಖಾಮುಖಿ; ಸವಾರ ಯುವತಿ ಸ್ಥಳದಲ್ಲೇ ಸಾವು
ಬೆಳ್ತಂಗಡಿ: ಬೈಕ್ ಮತ್ತು ಟಿಪ್ಪರ್ ಡಿಕ್ಕಿಯಾಗಿ ಯುವತಿಯೊಬ್ಬಳು ಮೃತಪಟ್ಟ ಘಟನೆ ಪಡಂಗಡಿ ಸಮೀಪದ ತಿರುವಿನಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಬ್ರಹ್ಮಾವರದ ಚೆರ್ಕಾಡಿ ಗ್ರಾಮದ ಪಾರ್ವತಿಬೆಟ್ಟು ಮನೆಯ ಶ್ರೀನಿವಾಸ ಸೇರಿಗಾರ ಎಂಬುವರ ಪುತ್ರಿ ಜ್ಯೋತಿ(27) ಮೃತ ಯುವತಿ. ಇವರು ಸ್ನೇಹಿತ ನಾಗರಾಜ ನಾಯ್ಕ ಎಂಬವರೊಂದಿಗೆ ಬೈಕ್ನಲ್ಲಿ ಗುರುವಾಯನಕೆರೆಯಿಂದ ಮೂಡುಬಿದರೆ ಕಡೆಗೆ ಹೋಗುತ್ತಿದ್ದಾಗ ಬದ್ಯಾರಿನಿಂದ ಮುಂದೆ ಪಡಂಗಡಿ ಸಮೀಪದ ತಿರುವಿನಲ್ಲಿ ಎದುರಿನಿಂದ ಡಾಂಬರು ತುಂಬಿಸಿಕೊಂಡು ಬರುತ್ತಿದ್ದ ಟಿಪ್ಪರ್ಗೆ ಮುಖಾಮುಖಿ ಡಿಕ್ಕಿಯಾಯಿತು. ಬೈಕ್ನಲ್ಲಿ ಕುಳಿತಿದ್ದ ಜ್ಯೋತಿ ರಸ್ತೆಗೆಸೆಯಲ್ಪಟ್ಟು ಟಿಪ್ಪರ್ ಆಕೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಅಸುನೀಗಿದಳು. ಜೋತಿಷ್ಯ ಕೇಳಲೆಂದು ಬ್ರಹ್ಮಾವರದಿಂದ ಮೂಡುಬಿದಿರೆಗೆ ಹೋಗುತ್ತಿದ್ದ ಇವರು ಕಾರ್ಕಳದಿಂದ ಮೂಡುಬಿದಿರಿಗೆ ಹೋಗುವ ಬದಲು ದಾರಿ ತಪ್ಪಿ ಗುರುವಾಯನಕೆರೆ ಮಾರ್ಗವಾಗಿ ಬಂದು ವೇಣೂರು ರಸ್ತೆಯಲ್ಲಿ ಮೂಡುಬಿದಿರಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಸವಾರ ನಾಗರಾಜ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.