ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಅನಿಲ ಸಾಗಣೆ ಟ್ಯಾಂಕರ್ ಹರಿದು ಬಾಲಕ ಸಾವು

Mainashree
Updated On : 6 Jul 2014, 10:52 am

ಉಪ್ಪಿನಂಗಡಿ: ರಾ.ಹೆ. 75 ದಾಟುತ್ತಿದ್ದ ಬಾಲಕನ ಮೇಲೆ ಅನಿಲ ಸಾಗಣೆ ಟ್ಯಾಂಕರ್ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ಸಾಯಂಕಾಲ ಇಲ್ಲಿನ ಮಠ ಸಮೀಪದ ಹಿರ್ತಡ್ಕ ಎಂಬಲ್ಲಿ ಸಂಭವಿಸಿದೆ.
ಮಠದ ನಿವಾಸಿ ಅಶ್ರಫ್ ಎಂಬವರ ಮಗ ಅಸ್ಲಾಂ (9) ಮೃತಪಟ್ಟ ಬಾಲಕ.
ಸಾಯಂಕಾಲ ಗೆಳೆಯರೊಡನೆ ಆಟವಾಡಲೆಂದು ಮನೆಯಿಂದ ಹೊರಬಂದವನು, ಹೆದ್ದಾರಿ ದಾಟುವ ಯತ್ನದಲ್ಲಿದ್ದಾಗ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಬಾಲಕನ ಮೇಲೆಯೇ ಚಲಿಸಿತು. ಈ ಪರಿಣಾಮ ಗಂಭೀರ ಗಾಯಗೊಂಡು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದನು.
ಕೂಲಿ ಕಾರ್ಮಿಕ ಅಶ್ರಫ್ ಅವರ ನಾಲ್ಕು ಮಕ್ಕಳಲ್ಲಿ ಕೊನೆಯವನಾದ ಅಸ್ಲಾಂ ಮಠದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ.
ಉದ್ರಿಕ್ತರಿಂದ ಹಲ್ಲೆ: ಬಾಲಕನನ್ನು ಬಲಿತೆಗೆದುಕೊಂಡ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಮೇಲೆ ಸ್ಥಳೀಯ ಜನತೆ ಆಕ್ರೋಶಗೊಂಡು ಹಲ್ಲೆ ನಡೆಸಿದ ಘಟನೆ ನಡೆಯಿತು.
 ಸ್ಥಳಕ್ಕಾಗಮಿಸಿದ ಪೊಲೀಸರು ಸಕಾಲಿಕ ಕ್ರಮ ಕೈಗೊಂಡು ಉದ್ರಿಕ್ತರಿಂದ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್‌ನನ್ನು ರಕ್ಷಿಸಿದರು. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement