ಕಡಿಮೆ ಬೋನಸ್ ಆರೋಪ: ಬೀಡಿ ಕಾರ್ಮಿಕರ ಮುಷ್ಕರ
ಕಾರ್ಕಳ: ನಿಗದಿತ ಬೋನಸ್ ನೀಡದಿರುವುದನ್ನು ವಿರೋಧಿಸಿ ನಲ್ಲೂರಿನಲ್ಲಿ ಬೀಡಿ ಕಾರ್ಮಿಕರು ಮುಷ್ಕರ ನಡೆಸಿದ್ದಾರೆ.
ನಲ್ಲೂರಿನಲ್ಲಿ ಕಂಪನಿಯೊಂದರ ಬೀಡಿ ಬ್ರಾಂಚಿನಲ್ಲಿ ಹಲವು ಮಂದಿ ಕಾರ್ಮಿಕರು ಇದ್ದಾರೆ. ಕಳೆದ ಹಲವು ವರ್ಷಗಳಿಂದ ಕಂಪನಿ ಶೇ.28ರಷ್ಟು ಬೋನಸ್ ನೀಡದೆ, ಶೇ.10ರಷ್ಟು ಮಾತ್ರ ಬೋನಸ್ ನೀಡಿ ವಂಚಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಬೇರೆ ಎಲ್ಲಾ ಕಂಪನಿಗಳಲ್ಲಿ ಶೇ.28ರಷ್ಟು ಬೋನಸ್ ನೀಡುತ್ತಿದ್ದರೂ ತಮಗೆ ಮಾತ್ರ ವಂಚಿಸಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸದಿದದಲ್ಲಿ ಅನಿರ್ದಿಷ್ಟ ಅವಧಿ ವರೆಗೆ ಮುಷ್ಕರ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.