ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ದ.ಕ. ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಕೆ.ಪಿ.ರಾವ್

Mainashree
Updated On : 11 Jul 2014, 10:00 am

ಮಂಗಳೂರು: ಶ್ರೀಕ್ಷೇತ್ರ ಪೊಳಲಿಯಲ್ಲಿ ಆ.1 ಮತ್ತು 2ರಂದು ನಡೆಯುವ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಕಂಪ್ಯೂಟರ್ ವಿಜ್ಞಾನಿ, ಸಾಫ್ಟ್ವೇರ್ ಭಾಷಾ ತಜ್ಞ, ಗಣಕ ಮಹೋಪಾಧ್ಯಾಯ ಕಿನ್ನಿಕಂಬಳ ಡಾ.ಪದ್ಮನಾಭ ರಾವ್ (ಕೆ.ಪಿ.ರಾವ್) ಆಯ್ಕೆಯಾಗಿದ್ದಾರೆ.
 ಕಂಪ್ಯೂಟರ್, ವಿಜ್ಞಾನ, ಸಾಹಿತ್ಯ, ತತ್ವಶಾಸ್ತ್ರ, ಗಣಿತ, ಎಂಜಿನಿಯರಿಂಗ್, ಮುದ್ರಣ ತಂತ್ರಜ್ಞಾನ, ಕನ್ನಡ, ಸಂಸ್ಕೃತ, ತುಳು ಭಾಷೆಗಳ ವಿದ್ವಾಂಸರಾದ ಕೆ.ಪಿ. ರಾವ್, ಭಾರತೀಯ ಭಾಷೆಗಳ ಕಂಪ್ಯೂಟರೀಕರಣದ ಆಚಾರ್ಯರೆಂದೇ ಖ್ಯಾತರು. ಪ್ರಸ್ತುತ ವ್ಯಾಪಕವಾಗಿ ಬಳಕೆಯಲ್ಲಿರುವ ರಾಜ್ಯ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ರೂಪಿಸಿದ್ದು ಇವರು.
 ಕಿನ್ನಿಕಂಬಳ ಸರ್ಕಾರಿ ಶಾಲೆ, ಅಲೋಶಿಯಸ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ, ಡಾನ್ಕ್ನುಥ್, ಪ್ರೊ.ವಾರ್ಸೋಕ್, ಡಾ.ರಾಜಾರಾಮಣ್ಣ, ಡಿಡಿ ಕೋಸಾಂಬಿ, ಸೇಡಿಯಾಪು ಮೊದಲಾದವರ ಒಡನಾಟ, ದೇಶ ವಿದೇಶಗಳ ತಿರುಗಾಟ, ಸತತ ಅಧ್ಯಯನ ಹಿನ್ನೆಲೆ ನಡೆಸಿದ್ದರು. ಐಐಟಿ ಮುಂಬಯಿ, ಟಾಟಾ ವಿಜ್ಞಾನ ಸಂಸ್ಥೆ ಮಣಿಪಾಲ,
 ನಿಟ್ಟೆಗಳಲ್ಲಿ ನಾಲ್ಕು ದಶಕಗಳ ಕಾಲ ಅಧ್ಯಾಪಕ ಜತೆಗೆ ವಿಕಿ ಪಿಡಿಯಾ, ಯೂಟ್ಯೂಬ್ ಸಹಿತ ಹಲವು ಕೋಶಗಳಿಗೆ ಸಂಪಾದಕ, ಕಂಪ್ಯೂಟರ್ ದಾಖಲಾತಿ, ರಕ್ಷಣೆ, ಭಾಷಾ ರೂಪಗಳಲ್ಲಿ ಹಲವು ವಿನ್ಯಾಸಗಳ ಕೊಡುಗೆ, ಉಚ್ಛಾರ ತರ್ಕದ ಅನ್ವಯ ನೀಡಿದ ಮೊದಲ ಸಂಶೋಧಕ. ಇದೀಗ ಪಾಣಿನಿಯ ವ್ಯಾಕರಣದ ಕಂಪ್ಯೂಟರೀಕರಣ ಬೃಹತ್ ಯೋಜನೆ ರೂಪಿಸಿದ್ದಾರೆ.
 ಹಂಪಿ ವಿವಿ ನಾಡೋಜ, ಕರ್ನಾಟಕ ರಾಜ್ಯೋತ್ಸವ ಗೌರವ, ಆಳ್ವಾಸ್ ನುಡಿಸಿರಿ ಸಹಿತ ಹಲವು ಗೌರವಗಳಿಗೆ ಪಾತ್ರರು. ಪತ್ನಿ ನಿರ್ಮಲಾ, ಇಬ್ಬರು ಮಕ್ಕಳು ಇದ್ದಾರೆ. 74ರ ಹರೆಯದಲ್ಲೂ ನಿತ್ಯ ಅಭ್ಯಾಸ, ನಿತ್ಯ ಶೋಧನೆಯಲ್ಲಿ ನಿರತರಾಗುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement