ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸರಳ ಭಕ್ತಿಯ ಶ್ರೇಷ್ಠ ಸಂತ ಕನಕದಾಸರು: ಬಂಜೆಗೆರೆ

Mainashree
Updated On : 11 Jul 2014, 10:00 am

ಕೋಟ: ಆಡಂಬರದ ಪೂಜೆ ಬದಲಾಗಿ ಕೀರ್ತನೆ ಮೂಲಕ ದೇವರ ಮನೆಯಂಗಳಕ್ಕೆ ತಂದಿಡುವ ಸರಳ ಭಕ್ತಿಯ ಶ್ರೇಷ್ಠ ಸಂತ ಕನಕದಾಸ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಬಂಜೆಗೆರೆ ಜಯಪ್ರಕಾಶ್ ತಿಳಿಸಿದರು.
ಅವರು ಇಲ್ಲಿನ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆದ 'ಮುತ್ತು ಬಂದಿದೆ ಕೇರಿಗೆ' ಎಂಬ ಕನಕದಾಸರ ಕುರಿತಾದ ಒಂದು ದಿನದ ಉಪನ್ಯಾಸ- ವಾಚನ- ಗಾಯನ ರಸಗ್ರಹಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರ ವ್ಯಕ್ತಿತ್ವ - ಆದರ್ಶಗಳನ್ನು ಯುವಜನತೆ ಬಹಳ ಗಂಭೀರವಾಗಿ ಪರಿಗಣಿಸಿ ಸಾಮಾಜಿಕ ಪರಿವರ್ತನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರಿನ ಕನಕದಾಸ ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ. ತ. ಚಿಕ್ಕಣ್ಣ, ಕನಕದಾಸರನ್ನು ಕೇವಲ ಭಕ್ತನನ್ನಾಗಿ ಬಿಂಬಿಸುವ ಬದಲು ಮಾನವೀಯ ಸಮಾನತೆ ಸಂದೇಶ ಸಾರಿದ ಸಮಾಜ ಸುಧಾರಕನನ್ನಾಗಿ ನೋಡಬೇಕು ಎಂದು ಅಭಿಪ್ರಾಯಪಟ್ಟರು.
 ಸ್ಥಳೀಯ ಜನಪ್ರತಿನಿಧಿ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ, ಕಾಲೇಜು ಅಭಿವೃದ್ಧಿ ಸದಸ್ಯ ರಮೇಶ್ ಎಚ್. ಕುಂದರ್ ಇದ್ದರು. ಕಾಲೇಜಿನ ಪ್ರಾಂಶುಪಾಲ ಕೆಂಜೂರು ವಸಂತರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಗಣೇಶ್ ಗಂಗೊಳ್ಳಿ ಮತ್ತು ತಂಡದವರಿಂದ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು. ಮಂಜುನಾಥ ಆಚಾರಿ ಎಳ್ಳಂಪಳ್ಳಿ  ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಜೇಂದ್ರ ಎಸ್. ನಾಯಕ್ ಸ್ವಾಗತಿಸಿ, ಪ್ರಶಾಂತ್ ನೀಲಾವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement