ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಸಮಯ ಬದಲಾವಣೆ ಇಂದಿನಿಂದ
ಮಂಗಳೂರು: ಯಶವಂತಪುರ- ಕಾರವಾರ ಎಕ್ಸ್ಪ್ರೆಸ್ (16515/16516) ಮತ್ತು ಯಶವಂತಪುರ- ಕಾರವಾರ ಎಕ್ಸ್ಪ್ರೆಸ್ (16524/16523) ರೈಲುಗಳ ವೇಳಾಪಟ್ಟಿಯನ್ನು ಬಂಟ್ವಾಳದಿಂದ ಯಶವಂತಪುರ ಮಧ್ಯೆ ಜು.12ರಿಂದ ಜಾರಿಗೆ ಬರುವಂತೆ ಬದಲಾಯಿಸಲಾಗಿದೆ.
ಎಡಮಂಗಲ ಮತ್ತು ನೇರಳಕಟ್ಟೆಯಲ್ಲಿ ರೈಲಿಗೆ ನಿಲುಗಡೆ ಕಲ್ಪಿಸಿದ ಕಾರಣ ವೇಳಾಪಟ್ಟಿಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಮಂಗಳೂರಿನಿಂದ ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ, ಬಂಟ್ವಾಳದಿಂದ ಮಾತ್ರ ವೇಳಾಪಟ್ಟಿ ಬದಲಾವಣೆ ಅನ್ವಯವಾಗಲಿದೆ ಎಂದು ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಹಗಲು ರೈಲು ವೇಳೆ: ಮಂಗಳವಾರ, ಗುರುವಾರ ಮತ್ತು ಶನಿವಾರ ಸಂಚರಿಸುವ ಹಗಲು ರೈಲು ಮಧ್ಯಾಹ್ನ 12.10ಕ್ಕೆ ಬಂಟ್ವಾಳ ತಲಪುದು. ಕಬಕ ಪುತ್ತೂರಿಗೆ 12.34, ಸುಬ್ರಹ್ಮಣ್ಯ ಮಾರ್ಗಕ್ಕೆ 1.14, ಸಕಲೇಶಪುರ 3.30, ಹಾಸನ 4.38, ಅರಸೀಕೆರೆ ಜಂಕ್ಷನ್ ಸಂಜೆ 6, ತಿಪಟೂರು ರಾತ್ರಿ 7.13, ತುಮಕೂರು 8.28, ಯಶವಂತಪುರಕ್ಕೆ 10 ಗಂಟೆಗೆ ತಲುಪಲಿದೆ. ಯಶವಂತಪುರದಿಂದ ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ ಬೆಳಗ್ಗೆ 7.30ಕ್ಕೆ ಹೊರಟು ತುಮಕೂರು 8.33, ತಿಪಟೂರು 9.53, ಅರಸೀಕೆರೆ ಜಂಕ್ಷನ್ 10.50, ಹಾಸನ 11.48, ಸಕಲೇಶಪುರ 12.45, ಸುಬ್ರಹ್ಮಣ್ಯ ಮಾರ್ಗ ಸಂಜೆ 3.25, ಕಬಕ ಪುತ್ತೂರು 4.18, ಬಂಟ್ವಾಳ 4.48ಕ್ಕೆ ತಲಪಲಿದೆ.
ರಾತ್ರಿ ರೈಲು ಸಮಯ: ಪ್ರತಿದಿನ ಸಂಚರಿಸುವ ರಾತ್ರಿ ರೈಲು ಬಂಟ್ವಾಳಕ್ಕೆ ರಾತ್ರಿ 9.43ಕ್ಕೆ ತಲಪುವುದು. ಕಬಕ ಪುತ್ತೂರು 10.13, ಸುಬ್ರಹ್ಮಣ್ಯ ಮಾರ್ಗ 11.50, ಸಕಲೇಶಪುರ ರಾತ್ರಿ 1.25, ಹಾಸನ 2.50, ಹೊಳೆನರಸೀಪುರ 3.33, ಕೃಷ್ಣರಾಜನಗರ 4.23, ಮೈಸೂರು ಬೆಳಗ್ಗೆ 5.20, ಮಂಡ್ಯ 6.23, ಚೆನ್ನಪಟ್ಟಣ 7ಗಂಟೆ, ರಾಮನಗರ 7.09, ಕೆಂಗೇರಿ 7.38, ಬೆಂಗಳೂರು ಸಿಟಿ 8.15, ಯಶವಂತಪುರ 8.55ಕ್ಕೆ ತಲಪುವುದು.
ರಾತ್ರಿ ರೈಲು ಯಶವಂತಪುರದಿಂದ 8.35ಕ್ಕೆ ಹೊರಟು ಬೆಂಗಳೂರು ಸಿಟಿ 8.50, ಕೆಂಗೇರಿ 9.08, ರಾಮನಗರ 9.36, ಚನ್ನಪಟ್ಟಣ 9.45, ಮಂಡ್ಯ 10.40, ಮೈಸೂರು 12.30, ಕೃಷ್ಣರಾಜನಗರ 1 ಗಂಟೆ, ಹೊಳೆನರಸೀಪುರ 1.08, ಹಾಸನ 1.45, ಸಕಲೇಶಪುರ 3.05, ಸುಬ್ರಹ್ಮಣ್ಯ ಮಾರ್ಗ ಬೆಳಗ್ಗೆ 5.50, ಕಬಕ ಪುತ್ತೂರು 7.08, ಬಂಟ್ವಾಳಕ್ಕೆ 7.43ಕ್ಕೆ ತಲಪಲಿದೆ.
ಮಂಡ್ಯ-ಬೆಂಗಳೂರು ಸಿಟಿ ಸಂಚಾರ: ಆ.15ರಿಂದ ಯಶವಂತಪುರ-ಕಣ್ಣೂರು-ಕಾರವಾರ ರಾತ್ರಿ ರೈಲು ಯಶವಂತಪುರ ಬದಲು ಬೆಂಗಳೂರು ಸಿಟಿಯಲ್ಲಿ ನಿಲುಗಡೆಯಾಗಲಿದೆ. ಮೈಸೂರಿನಿಂದ ಕಾರವಾರ ವರೆಗೆ ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲ. ಈ ರೈಲು ಮಂಡ್ಯದಿಂದ ಬೆಂಗಳೂರು ಸಿಟಿ ತಲಪುವ ಸಮಯದಲ್ಲಿ ವ್ಯತ್ಯಾಸ ಉಂಟಾಗಲಿದೆ.
ಮಂಡ್ಯಕ್ಕೆ ಬೆಳಗ್ಗೆ 6.23ಕ್ಕೆ ತಲಪುವ ರೈಲು ಚೆನ್ನರಾಯಪಟ್ಟಣಕ್ಕೆ 6.49, ರಾಮನಗರ 7.04, ಕೆಂಗೇರಿ 7.50, ಬೆಂಗಳೂರು ಸಿಟಿ 8.20ಕ್ಕೆ ತಲಪುವುದು.
ಬೆಂಗಳೂರು ಸಿಟಿಯಿಂದ ರಾತ್ರಿ 8ಕ್ಕೆ ಹೊರಟು ಕೆಂಗೇರಿ 8.18, ರಾಮನಗರ 8.46, ಚೆನ್ನರಾಯಪಟ್ಟಣ 8.56, ಮಂಡ್ಯ 9.18ಕ್ಕೆ ತಲಪಲಿದೆ.