ಇನ್ನೊಂದು ಮನೆಗೆ ಅಂಗನವಾಡಿ!
ಮಂಗಳೂರು: ಬೆಳ್ತಂಗಡಿ ಅಂಡಿಂಜೆ ಸಾವ್ಯ ಗ್ರಾಮದ ಮೀಯೊಟ್ಟುಪಲ್ಕೆ ಕೊರಗ ಕಾಲನಿಯ ಶೀನ ಎಂಬವರ ಮನೆಯಲ್ಲಿ ನಡೆಯುತ್ತಿದ್ದ ಅಂಗನವಾಡಿ ಕೇಂದ್ರವನ್ನು ಹತ್ತಿರದ ಕರಿಯ ಪೂಜಾರಿ ಎಂಬವರ ಮನೆಗೆ ಸ್ಥಳಾಂತರಗೊಳಿಸಲಾಗಿದೆ. ಶೀನ ಕೊರಗ ದಂಪತಿಗೆ ಮನೆ ಹಸ್ತಾಂತರಿಸಲಾಗಿದೆ. ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಗುರುತಿಸಲಾಗಿದ್ದು, ತಾ.ಪಂ. ಮತ್ತು ಇಲಾಖೆ ಅನಾದನದಿಂದ ಶೀಘ್ರ ಕಟ್ಟಡ ನಿರ್ಮಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.